Advertisement
ಭಾರತ ಅಣ್ವಸ್ತ್ರ ಪ್ರಯೋಗಿಸಿ 15 ದಿನಗಳಲ್ಲಿ ಪಾಕಿಸ್ಥಾನ ಕೂಡ ಅಣು ಪರೀಕ್ಷೆ ನಡೆಸಿತ್ತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ಥಾನದ ಮೇಲೆ ನಿಬಂìಧ ಹೇರಿದವು. ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾ ದಿಗಳೆಂಬಂತೆ ಬೇರೆಯಾಗಿದ್ದವರು ಸೇರುವ ಸಮಯ ಬಂದಿತ್ತು. ಭಾರತ ಹಿರಿಯಣ್ಣನಾಗಿ ಪಾಕಿಸ್ಥಾನ ವನ್ನು ತಬ್ಬಿಕೊಳ್ಳಲು, ಸ್ನೇಹದ ಮಾತುಗಳನ್ನಾಡಲು ಕೈ ಚಾಚಿತು. ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರ ಫೆ.20ರಂದು ಭಾರತದಿಂದ ಪಾಕಿಸ್ಥಾನದತ್ತ ಬಸ್ಸೊಂದನ್ನು ಹೊರಡಿಸಿದರು. ಇತಿ ಹಾಸದ ಪುಟಕ್ಕೆ ಹೊಸ ದಾಖಲೆ ಸೇರಿಸುವ ಸಂತಸ.
Related Articles
Advertisement
ಮರುದಿನವೇ ಸೇನೆ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು. 6 ಜನರ ತಂಡ ದೊಂದಿಗೆ ಭಜರಂಗ್ ಪೋಸ್ಟಿನತ್ತ ಹೊರಟರು, ಶತ್ರುಗಳಿ ರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಜೆಹಾದಿ ಸೈನಿಕರ ಬಂಧನದಲ್ಲಿ ಸೆರೆ ಸಿಕ್ಕಿ, ಚಿತ್ರಹಿಂಸೆಗೊಳಗಾಗಿ 22 ದಿನಗಳ ಸೆರೆಯ ಅನಂತರ ಕೊಲ್ಲಲ್ಪಟ್ಟರು.
ಮೇ 24ರಂದು ಇದು ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣ ಸಚಿವರು, ವಿದೇಶಾಂಗ ಸಚಿವರು, ಐಬಿ, ರಾಗಳು ಮತ್ತು ಮೂರೂ ಸೇನೆಯ ಮುಖ್ಯಸ್ಥ ರುಗಳನ್ನು ಸೇರಿಸಿ ಮಹತ್ವದ ಸಭೆ ನಡೆಸಿತು. ಭಾರತ ಸೇನೆಯ ಜನರಲ್ ಮಲಿಕ್ ಸೇನೆಯ ಮೂರೂ ವಿಭಾಗ ಗಳು ಜತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನು ಮತಿ ಕೊಡಿ ಎಂದು ಪ್ರಧಾನಿಗೆ ತಾಕೀತು ಮಾಡಿದರು. ಅನು ಮತಿ ದೊರೆತ ಅನಂತರ ಕೊನೆಯಲ್ಲಿ ಎದ್ದುನಿಂತು ನಿಶ್ಚಿತ ಗೆಲುವಿನ ಭರವಸೆಯಿಂದ ಇಡೀ ಹೋರಾಟ ವನ್ನು ಆಪರೇಷನ್ ವಿಜಯ ಎಂದು ಕರೆಯಲಾಯಿತು.
ಯುದ್ಧ ಬಹಳ ಜೋರಾಗಿಯೇ ಶುರುವಾಯಿತು. ದಾಳಿ-ಪ್ರತಿದಾಳಿಗಳು ನಡೆದವು. ವಿಮಾನಗಳ ವೇಗದ ಹಾರಾಟ, ಹೆಲಿಕಾಪ್ಟರ್‌ಗಳ ಭರ್ಜರಿ ಸದ್ಧು, ಮದ್ದು-ಗುಂಡುಗಳ ಅಬ್ಬರದ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ಸಾಗಿತ್ತು. ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಸಜ್ಜನರ ಸೋಗಿನ ವ್ಯಾಘ್ರ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರಿà ಪಿಂಪಲ್ಸ್‌ಗಳನ್ನು ಸಹಿತ ಹಲವಾರು ಪ್ರದೇಶ ಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಟಿಯಿಂದ ವಶಪಡಿಸಿಕೊಂಡಿತು.
ಸುಮಾರು 527 ಯೋಧರ ಬಲಿ ದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ ಆಪರೇಷನ್ ವಿಜಯದ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿತ್ತು. ಪಾಕಿಸ್ಥಾನ ತೀವ್ರ ಮುಖಭಂಗಕ್ಕೆ ಒಳಗಾಗಿತಲ್ಲದೆ ಬೆನ್ನಿಗೆ ಚೂರಿಹಾಕುವ ರಾಷ್ಟ್ರ ಎಂದು ಜಗತ್ತಿಗೆ ತಿಳಿಯಿತು.
ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದರ್ ಸಿಂಗ್ ಯಾದವ್, ಕ್ಯಾಪ್ಟನ್ ಅಮೋಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತಾ, ಕೆಂಗುರುಸೆ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ತರುಣ ಯೋಧರ ಸಾಹಸ ಮತ್ತು ತ್ಯಾಗದ ಪ್ರತೀಕವಾಗಿ ಗೆಲುವು ಪ್ರಾಪ್ತವಾಯಿತು. ಅಂತಹ ಸಾವಿರ ಸಾವಿರ ಯೋಧರ ಬಲಿದಾನವನ್ನು ನಾವಿಂದು ಸ್ಮರಿಸಿಕೊಳ್ಳಬೇಕಿದೆ. ನಾವು ಈ ಬಲಿದಾನದ ಕಥನಗಳನ್ನು ಮರೆತದ್ದೇ ಆದರೆ ಅದು ರಾಷ್ಟ್ರಕ್ಕೆ ಮಾಡುವ ಮೋಸ ಎಂಬುದು ನನ್ನ ಅಭಿಪ್ರಾಯ.
ಶಾಂತಿಯ ಹೊತ್ತಲ್ಲಿ ಮಗ ತಂದೆಯ ಶವಕ್ಕೆ ಅಂತ್ಯಸಂಸ್ಕಾರ ಮಾಡಿದರೆ, ಯುದ್ಧದ ಹೊತ್ತಲ್ಲಿ ತಂದೆಯೇ ಮಗನ ಚಿತೆಗೆ ಕೊಳ್ಳಿ ಇಡುತ್ತಾನೆ ಎಂದು ಕೇಳಿದ್ದೆ. ಕಾರ್ಗಿಲ್ ಯುದ್ಧ ಇಂತಹ ಅನೇಕ ಘಟನಾವಳಿಗಳಿಗೆ ಸಾಕ್ಷಿಯಾಯಿತು. ಅದು ಪಾಕಿಸ್ಥಾನದಡೆಯಿಂದ ಅನಿರೀಕ್ಷಿತ ದಾಳಿ, ಆದರೆ ನಮ್ಮೆಡೆಯಿಂದ ನಿರೀಕ್ಷಿತ ಪ್ರತ್ಯುತ್ತರ. ಈ ಗೆಲುವಿನ ಶ್ರೇಯಸ್ಸೆಲ್ಲ ಹೋರಾಡಿದ, ಮಡಿದ ಭಾರತ ಮಾತೆಯ ಅಮರ ಪುತ್ರರಿಗೆ ಸಲ್ಲಬೇಕು.
ರಾಷ್ಟ್ರಕ್ಕಾಗಿ ಸಾಯುವ ಅವಕಾಶ ಬಲು ಕಡಿಮೆ ಆದರೂ ಅದನ್ನು ಪಡೆದವ ಧನ್ಯ. ಅಂತಹ ಪುಣ್ಯಾತ್ಮರಿಗೊಂದು ನಮನ ನಮ್ಮಿಂದ ಸಮರ್ಪಣೆ ಆಗಲಿ. ಜತೆಗೆ ಒಂದು ಭಿನ್ನಹವೆಂದರೆ, ರಾಷ್ಟ್ರಕ್ಕಾಗಿ ಬದುಕುವ ಅಥವಾ ಮಡಿಯುವ ಪುಟ್ಟ ಅವಕಾಶ ಸಿಕ್ಕರೂ ಅದನ್ನು ಕಳೆದುಕೊಳ್ಳದಿರಿ. ಇದುವೇ ನಾವು ಹುತಾತ್ಮರಿಗೆ ಕೊಡುವ ಬಹುದೊಡ್ಡ ಗೌರವ.