Advertisement

ಕೃಷಿ ಕ್ಷೇತ್ರಗಳಿಗೆ ಸಿಗಲಿದೆ ಹಲವು ವಿನಾಯಿತಿ?

02:21 AM May 04, 2020 | Hari Prasad |

ಕೋವಿಡ್ 19 ವೈರಸ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಕೃಷಿ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಲಿದ್ದಾರೆಯೇ?

Advertisement

ಕೃಷಿ ಕ್ಷೇತ್ರ ಸುಧಾರಣೆಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರು ಶನಿವಾರ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದು ಇಂಥದ್ದೊಂದು ಭರವಸೆಯನ್ನು ಹುಟ್ಟುಹಾಕಿದೆ.

ಸಭೆಯಲ್ಲಿ ಪ್ರಧಾನಿ ಮೋದಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ, ರೈತರಿಗೆ ಸಾಂಸ್ಥಿಕ ಸಾಲ ಹಾಗೂ ಕಾನೂನಿನ ಬೆಂಬಲದೊಂದಿಗೆ ವಿವಿಧ ನಿರ್ಬಂಧಗಳಿಂದ ವಿನಾಯಿತಿ ನೀಡುವ ಕುರಿತು ಚರ್ಚಿಸಿದ್ದಾರೆ.

ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸುಧಾರಣಾ ಕ್ರಮಗಳ ಜಾರಿ, ಪಿಎಂ-ಕಿಸಾನ್‌ ಯೋಜನೆಯ ಫ‌ಲಾನುಭವಿಗಳಿಗೆ ವಿಶೇಷ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಣೆ ಕಾರ್ಯಕ್ರಮ, ಉತ್ಪನ್ನಗಳನ್ನು ರಾಜ್ಯದೊಳಗೆ ಮತ್ತು ಅಂತಾರಾಜ್ಯ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡುವ ಕುರಿತೂ ಪ್ರಮುಖವಾಗಿ ಚರ್ಚಿಸಲಾಗಿದೆ.

ಇನಾಮ್‌ ಅಥವಾ ರಾಷ್ಟ್ರೀಯ ಕೃಷಿ ಮಾರುಕಟ್ಟೆಯನ್ನು ಇ-ಕಾಮರ್ಸ್‌ ಕ್ಷೇತ್ರಕ್ಕೆ ಮುಕ್ತಗೊಳಿಸುವ ಕುರಿತೂ ಮಾತುಕತೆ ನಡೆದಿದೆ. ಮಾದರಿ ಕೃಷಿ ಭೂಮಿ ಭೋಗ್ಯ ಕಾಯ್ದೆ, 2016ರಲ್ಲಿರುವ ಸವಾಲುಗಳ ಕುರಿತೂ ಚರ್ಚಿಸಲಾಗಿದೆ.

Advertisement

ಶೀಘ್ರ 2ನೇ ಹಂತದ ಆರ್ಥಿಕ ಪ್ಯಾಕೇಜ್‌
ಕೋವಿಡ್ 19 ವೈರಸ್ ನಿರ್ಬಂಧದಿಂದಾಗಿ ಬಿಕ್ಕಟ್ಟಿಗೆ ಸಿಲುಕಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ಕೇಂದ್ರ ಸರ್ಕಾರ ಎರಡನೇ ಹಂತದ ಉತ್ತೇಜನಾ ಪ್ಯಾಕೇಜ್‌ ಘೋಷಿಸುವ ಸಾಧ್ಯತೆಯಿದೆ.

ಅದಕ್ಕೆ ಪೂರಕವೆಂಬಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಇತರೆ ಪ್ರಮುಖ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದು, ಲಾಕ್‌ ಡೌನ್‌ ನಿಂದಾಗಿ ಸಂಕಷ್ಟಕ್ಕೀಡಾಗಿರುವ ವಲಯಗಳಿಗೆ ಎರಡನೇ ಹಂತದ ಉತ್ತೇಜನಾ ಪ್ಯಾಕೇಜ್‌ ಘೋಷಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ತದನಂತರ, ಶನಿವಾರ ರಾತ್ರಿ ಕೇಂದ್ರ ಹಣಕಾಸು ಸಚಿವಾಲಯವು ದೇಶದ ಸದ್ಯದ ಆರ್ಥಿಕ ಸ್ಥಿತಿಗತಿ ಮತ್ತು ಆರ್ಥಿಕತೆಯ ಚೇತರಿಕೆಗೆ ಕೈಗೊಳ್ಳಲಿಚ್ಛಿಸುವ ಕ್ರಮಗಳ ಕುರಿತು ಪ್ರಧಾನಿ ಮೋದಿಗೆ ವಿಸ್ತೃತ ಮಾಹಿತಿ ನೀಡಿದೆ. ಮಾರ್ಚ್‌ ನಲ್ಲಿ 1.7 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್‌ ಪ್ರಕಟಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next