Advertisement
ರಾಜ್ಯದ ವಿವಿಧ ಸ್ಥಳಗಳಿಂದ ಹನುಮಮಾಲಾಧಾರಿಗಳು ಸೇರಿ 40 ಸಾವಿರ ಹನುಮ ಭಕ್ತರು ಅಂಜನಾದ್ರಿಗೆ ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ಪಾರ್ಕಿಂಗ್ ಹಾಗೂ ಆಗಮಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಹನುಮಮಾಲಾಧಾರಿಗಳು ಹನುಮನಹಳ್ಳಿ ಋಷಿಮುಖ ಪರ್ವತದ ಹತ್ತಿರ ತುಂಗಭದ್ರಾ ನದಿ ಮತ್ತು ವಿಜಯನಗರ ಕಾಲುವೆಯಲ್ಲಿ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಅಂಜನಾದ್ರಿಗೆ ಬರಲು ಸ್ವಾಗತ ಕಮಾನು ನಿರ್ಮಿಸಲಾಗಿದೆ.
Related Articles
Advertisement
ಇದನ್ನೂ ಓದಿ:ಐತಿಹಾಸಿಕ ಸ್ಮಾರಕ ರಕ್ಷಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ
ಏ.15 ಮತ್ತು 16 ರಂದು ದಿನದ 24 ಗಂಟೆ ವಿದ್ಯುತ್ ಸರಬರಾಜು ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕಂದಾಯ, ಪೊಲೀಸ್, ಅರಣ್ಯ, ಜೆಸ್ಕಾಂ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಅಂಜನಾದ್ರಿಯಲ್ಲಿದ್ದು ಆಗಮಿಸುವ ಭಕ್ತರಿಗೆ ಸೇವೆ ನೀಡಲಿದ್ದಾರೆ. ಏ.16 ರಂದು ಒಂದು ದಿನದ ಮಟ್ಟಿಗೆ ಗಂಗಾವತಿ-ಮುನಿರಾಬಾದ(ಹುಲಿಗಿ) ನಿರಂತರ ಬಸ್ ಮಾರ್ಗವನ್ನು ವಾಯ ಜಂಗ್ಲಿ(ರಂಗಾಪೂರ) ಸಾಣಾಪೂರ ಮೂಲಕ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಬಂದೋಬಸ್ತ್ ಗಾಗಿ ಇಬ್ಬರು ಡಿಎಸ್ಪಿ, 05 ಜನ ಸಿಪಿಐ, 9 ಜನ ಪಿಎಸೈ, 200ಕ್ಕೂ ಹೆಚ್ಚು ಹೋಂಗಾರ್ಡ್ ಪೊಲೀಸರು ಸೇರಿ ಕೆಎಸ್‌ಆರ್‌ಪಿ ಡಿಎಆರ್ ಪೊಲೀಸ್ ತುಕಡಿಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.