Advertisement
ನಗರದಲ್ಲಿ ಇತ್ತೀಚೆಗೆ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಹವಾನಿಯಂತ್ರಿತ ಹೋಟೆಲ್‌ಗಳಿಗೆ ಶೇ.18ರಿಂದ ಶೇ.12ರಷ್ಟು ತೆರಿಗೆ ಇಳಿಕೆ ಒತ್ತಾಯಕ್ಕೆ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂಬಂತೆ ಸಚಿವರು ತಿಳಿಸಿದ್ದಾರೆ. ತೆರಿಗೆ ಇಳಿಕೆಯಾದರೆ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತವಲ್ಲದ ಹೋಟೆಲ್‌ಗಳಿಗೆ ಸಮಾನವಾಗಿ ಶೇ.12ರಷ್ಟು ತೆರಿಗೆ ಇರಲಿದೆ ಎಂದು ಹೇಳಿದರು. ವಾರ್ಷಿಕ ವಹಿವಾಟು 20 ಲಕ್ಷ ರೂ. ಮೀರಿದ ಎಲ್ಲ ಬಗೆಯ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಸಮಾನವಾಗಿ ಶೇ.5ರಷ್ಟು ತೆರಿಗೆ ವಿಧಿಸಬೇಕೆಂಬ ಮನವಿಯನ್ನು ಮತ್ತೆ ಸಲ್ಲಿಸಲಾಯಿತು. ಈ ವ್ಯವಸ್ಥೆ ಜಾರಿಗೊಳಿಸಿದರೆ ಪರಿಹಾರ ಸೌಲಭ್ಯ (ಕಾಂಪೋಸಿಷನ್) ರದ್ದುಪಡಿಸಬಹುದು. ಅಲ್ಲದೇ ಹೋಟೆಲ್ ಮಾಲೀಕರು ಸಹ ಗ್ರಾಹಕರಿಗೆ ತೆರಿಗೆ ಹೊರೆ ಹಸ್ತಾಂತರಿಸದೆ ಮಾಲೀಕರೇ ಭರಿಸಬಹುದಾಗಿದೆ. ತಾರಾ ಹೋಟೆಲ್‌ಗಳಿಗೆ ಗರಿಷ್ಠ ತೆರಿಗೆ ವಿಧಿಸಬಹುದು ಎಂಬ ಅಂಶವನ್ನೂ ಸಚಿವರ ಗಮನಕ್ಕೆ ತರಲಾಯಿತು. ಈ ವಿಚಾರ ಮನವರಿಕೆಯಾಗಿ ಸಚಿವರು ಸಹಮತ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ತೆರಿಗೆ ಪ್ರಮಾಣ ಇಳಿಕೆ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. Advertisement
ಹೋಟೆಲ್ಗಳಿಗೆ ಜಿಎಸ್ಟಿ ತೆರಿಗೆ ಇಳಿಕೆ ನಿರೀಕ್ಷೆ
06:20 AM Oct 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.