Advertisement

200 ದಿನಬಳಕೆ ಸರಕುಗಳ ಜಿಎಸ್‌ಟಿ ಇಳಿಕೆ ನಿರೀಕ್ಷೆ

06:35 AM Nov 10, 2017 | Team Udayavani |

ಪಾಟ್ನಾ: ಇದು ದೇಶವಾಸಿಗಳಿಗೆ ನೆಮ್ಮದಿ ತರುವಂಥ ಸುದ್ದಿ. ಸುಮಾರು 200ರಷ್ಟು ದಿನಬಳಕೆ ಸಾಮಗ್ರಿಗಳ ಜಿಎಸ್‌ಟಿ ಶೇ.28ರಿಂದ ಶೇ.18ಕ್ಕಿಳಿಸುವ ಸಾಧ್ಯತೆಯಿದೆ. ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಂಡಳಿಯ ಸಭೆ ನಡೆಯಲಿದ್ದು, ಅಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಜಿಎಸ್‌ಟಿ ಸಮಿತಿಯ ನೇತೃತ್ವ ವಹಿಸಿರುವ ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

Advertisement

ಎಲ್ಲವೂ ಅಂದುಕೊಂಡಂತೆ ನಡೆದರೆ, ಸೂಟ್‌ಕೇಸ್‌, ಭಿತ್ತಿಪತ್ರ, ಸ್ಯಾನಿಟರಿ ವೇರ್‌, ಪ್ಲೆ„ವುಡ್‌, ಸ್ಟೇಷನರಿ ವಸ್ತುಗಳು, ವಾಚ್‌ನಂಥ ದಿನಬಳಕೆಯ 200 ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದಿದ್ದಾರೆ. 

ಇದೇ ವೇಳೆ, ಸವಾಯಿ ಗಂಧರ್ವ ಭೀಮಸೇನ್‌ ಮಹೋತ್ಸವವನ್ನು ಆಯೋಜಿಸುವಂಥ ಪುಣೆಯ ಆರ್ಯ ಸಂಗೀತ ಪ್ರಸಾರಕ್‌ ಮಂಡಲ್‌ ನಿಯೋಗವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ಜಿಎಸ್‌ಟಿ ವಿನಾಯಿತಿ ನೀಡುವಂತೆ ಕೋರಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಅವರಿಗೆ ಈ ಕುರಿತ ಮನವಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next