Advertisement
ಮಾ.1ಕ್ಕೆ ಕೆ.ಸಿ.ವ್ಯಾಲಿ ಉದ್ಘಾಟನೆ: ರಾಜ್ಯ ಬಜೆಟ್ ಎಂದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ನಿರೀಕ್ಷೆ ಶಾಶ್ವತ ನೀರಾವರಿ ಸೌಲಭ್ಯಗಳು ಮಾತ್ರವೇ ಆಗಿದೆ. ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ ಕೆ.ಸಿ.ವ್ಯಾಲಿ ಹಾಗೂ ಎತ್ತಿನ ಹೊಳೆ ಯೋಜನೆಗಳ ಮೂಲಕಕೋಲಾರ ಜಿಲ್ಲೆಗೆ ನೀರು ಹರಿಸಲಾಗುತ್ತದೆ ಎಂದು ಘೋಷಿಸಿತ್ತು. ಕೆ.ಸಿ. ವ್ಯಾಲಿ ಯೋಜನೆ ಪ್ರಗತಿಯ ಲ್ಲಿದ್ದು, ಮಾರ್ಚ್ 1 ಕ್ಕೆ
ಉದ್ಘಾಟನೆಯಾಗಲಿದೆ ಎಂದು ಉಸ್ತುವಾರಿ ಸಚಿವ ರಮೇಶ್‌ಕುಮಾರ್ ಘೋಷಿಸಿದ್ದಾರೆ.
Related Articles
Advertisement
ನೀಲಗಿರಿ ನಿರ್ಮೂಲನೆಯಾಗಿಲ್ಲ: ಕೋಲಾರ ಜಿಲ್ಲೆಯ ಪರಿಸರಕ್ಕೆ ಮಾರಕವಾಗಿರುವ, ಅಂತರ್ಜಲ ಹಾಗೂ ವಾತಾವರಣದ ತೇವಾಂಶವನ್ನು ಹೀರುತ್ತದೆ ಎಂದು ಹೇಳಲಾಗುವ ನೀಲಗಿರಿ ನಿರ್ಮೂಲನೆಗೆ ಸರಕಾರ ಬಜೆಟ್‌ನಲ್ಲಿ ಘೋಷಿಸಿತ್ತು. 6 ಲಕ್ಷ ಶ್ರೀಗಂಧಸಸಿಗಳನ್ನು 700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸುವ ಪ್ರಸ್ತಾಪನೆ ಅನುಷ್ಠಾನವಾಗದೇ ನೆನೆಗುದಿಗೆ ಬೀಳುವಂತಾಗಿದೆ. ಕೆ.ಸಿ.ರೆಡ್ಡಿ ಸ್ಮಾರಕ: ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಸ್ಮಾರಕ ನಿರ್ಮಿಸಲು 2 ಕೋಟಿ ರೂ. ಅನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಇದು ಪೂರ್ಣ ಅನುಷ್ಠಾನವಾಗಲಿಲ್ಲವಾದರೂ, ಈ
ಕುರಿತು ಪೂರ್ವಭಾವಿ ಸಿದ್ಧತೆಗಳು ಸರಕಾರದ ಹಂತದಲ್ಲಿ ನಡೆಯುತ್ತಿರುವುದು ಸಮಾಧಾನಕರ ಸಂಗತಿ ಎನ್ನಬಹುದು. ಮೋಡ ಬಿತ್ತನೆ: ಮೋಡ ಬಿತ್ತನೆಯಿಂದ ಕೋಲಾರದಂತಹ ಬರಪೀಡಿತ ಜಿಲ್ಲೆಗಳಲ್ಲಿ ಮಳೆ ಸುರಿಸಲು 30 ಕೋಟಿ ರೂ. ವೆಚ್ಚ ಮಾಡುವುದಾಗಿ ಸರಕಾರ ಬಜೆಟ್ ನಲ್ಲಿ ಪ್ರಕಟಿಸಿತ್ತು. ಸರಕಾರ ಮೋಡ ಬಿತ್ತನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಮೋಡ ಬಿತ್ತನೆಯ
ಪರಿಣಾಮಕ್ಕಿಂತ ಈ ಬಾರಿ ಭರ್ಜರಿ ಮಳೆ ಸುರಿಯುವ ಮೂಲಕ ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ಕಾಣುವಂತಾಯಿತು. ಕೆರೆ ಸಂಜೀವಿನಿ: ರಾಜ್ಯದಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ 100 ಕೆರೆಗಳನ್ನು ಸಮಗ್ರವಾಗಿ
ಅಭಿವೃದ್ಧಿಪಡಿಸುವುದಾಗಿ ಸರಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಸುವ ವಿಚಾರದಲ್ಲಿ ಕೆರೆಗಳ ಜಿಲ್ಲೆ ಕೋಲಾರದಲ್ಲಿ ಅಂತಹ ಅಭಿವೃದ್ಧಿಯನ್ನು ಕಾಣಲಾಗಲಿಲ್ಲ. ಚಾಕಿ ಪ್ರಾಧಿಕಾರ: ಕೋಲಾರ ಜಿಲ್ಲೆ ರೇಷ್ಮೆ ಕೃಷಿಯ ಮೇಲೆ ಹೆಚ್ಚು ಅವಲಂಬಿಸಿದ್ದು, ಚಾಕಿ ಪ್ರಾಧಿಕಾರ ಆರಂಭಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಪ್ರಾಧಿಕಾರ ಎಲ್ಲಿ ಪ್ರಾರಂಭವಾಯಿತು ಎನ್ನುವ ಕುರಿತು ಮಾಹಿತಿ ಸಿಗಲಿಲ್ಲ. ಮಾವು ತೋಟಗಳ
ಪುನಃಶ್ಚೇತನ, ಹನಿ, ತುಂತುರು ನೀರಾವರಿ, ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ, ತೋಟಗಾರಿಕೆ, ಕೃಷಿ ಭಾಗ್ಯ, ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ಸಾಲ ಕೋಲಾರ ಜಿಲ್ಲೆಯ ರೈತಾಪಿ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ತಲುಪುವಂತಾಗಿದೆ ಬಜೆಟ್‌ನ ಪ್ರಮುಖ ನಿರೀಕ್ಷೆಗಳು ಕೋಲಾರ ಜಿಲ್ಲೆಯ ಈ ಬಾರಿಯ ಬಜೆಟ್ ನಿರೀಕ್ಷೆಗಳು ಕೆ.ಸಿ.ವ್ಯಾಲಿ ಯೋಜನೆ ಕಾಮಗಾರಿ
ಚುರುಕುಗೊಳ್ಳಬೇಕು. ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಬೇಕು. ಕೇಂದ್ರ ಪ್ರಕಟಿಸಿರುವ ವಿವಿಧ ರೈಲ್ವೆ ಯೋಜನೆಗಳಿಗೆ ಭೂಮಿ ನೀಡಬೇಕು. ರಾಜ್ಯ ಸರಕಾರದ ಅನುದಾನವನ್ನು ಘೋಷಿಸಬೇಕು. ಶಾಶ್ವತ ಬರಪೀಡಿತ ಕೋಲಾರ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ವಿಚಾರದಲ್ಲಿ ವಿಶೇಷ ರಿಯಾಯಿತಿ ಯೋಜನೆಗಳ
ಪ್ಯಾಕೇಜ್ ಘೋಷಿಸಬೇಕು. ನೂತನ ತಾಲೂಕಾಗಿರುವ ಕೆಜಿಎಫ್ನಲ್ಲಿ ಚಿನ್ನದ ಗಣಿ ಕಾರ್ಮಿಕರ ಕುಟುಂಬಗಳಿಗೆ ಕೈತುಂಬ ಕೆಲಸ ಸಿಗುವಂತೆ ಮಾಡಬೇಕು. ಚಿನ್ನದ ಗಣಿ ಪುನಾರಂಭಿಸಲು ರಾಜ್ಯ ಸರಕಾರ ಪ್ರಯತ್ನಿಸಬೇಕು. ಗಣಿಯ ಸಹಸ್ರಾರು ಹೆಕ್ಟೇರ್ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಹರಿಸಲು ವಿಶೇಷ ಯೋಜನೆಗಳನ್ನು ಘೋಷಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂಬುದು ಜಿಲ್ಲೆಯ ರೈತರು ಹಾಗೂ ನಾಗರಿಕರ ಆದ್ಯತೆಯ ಬೇಡಿಕೆಗಳಾಗಿವೆ. 25 ಕೋಟಿ ರೂ.ವೆಚ್ಚದಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೋಲಾರ ಜಿಲ್ಲೆಗೆ 2016 ನೇ ಬಜೆಟ್‌ನಲ್ಲಿ ಸರಕಾರ ವೈದ್ಯಕೀಯ ಕಾಲೇಜನ್ನು ಘೋಷಿಸಿತ್ತು. 2017 ರ ಬಜೆಟ್‌ನಲ್ಲಿ ಇದನ್ನು ಮರೆಸುವಂತೆ 25 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿತು. ವೈದ್ಯಕೀ ಯ ಕಾಲೇಜಿನಂತಲ್ಲದಿದ್ದರೂ, ಸೂಪರ್ ಸ್ಪೆಷಾ ಲಿಟಿ ಆಸ್ಪತ್ರೆಗೆ ಶ್ರೀನಿವಾಸಪುರ ಸಮೀಪ ಜಾಗ
ಹುಡುಕಲಾಗಿದೆ. ಆಸ್ಪತ್ರೆ ಕಾಮಗಾರಿಗೆ ಚಾಲನೆ ನೀಡಿರುವುದು ಸದ್ಯದ ಸ್ಥಿತಿಯಾಗಿದೆ. ಕೆ.ಎಸ್.ಗಣೇಶ್