Advertisement

ಕರ ಸಮಾಧಾನ ಸೌಲಭ್ಯ ಅವಧಿ ಜು.31ರವರೆಗೆ ವಿಸ್ತರಣೆ

11:16 PM Jun 29, 2019 | Lakshmi GovindaRaj |

ಬೆಂಗಳೂರು: ಜಿಎಸ್‌ಟಿ ಜಾರಿಗೂ ಮುನ್ನ ವ್ಯಾಪಾರ-ವಹಿವಾಟುದಾರರು ಬಾಕಿ ಉಳಿಸಿಕೊಂಡಿದ್ದ ತೆರಿಗೆಗೆ ಸಂಬಂಧಪಟ್ಟಂತೆ ಬಡ್ಡಿ, ದಂಡ ವಿನಾಯ್ತಿ ನೀಡಿ ಏಕಕಾಲಕ್ಕೆ ತೆರಿಗೆ ಪಾವತಿಸಲು ಕಲ್ಪಿಸಿದ್ದ ಕರ ಸಮಾಧಾನ ಸೌಲಭ್ಯವನ್ನು ಜು.31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಜಿಎಸ್‌ಟಿ ಜಾರಿಗೂ ಮೊದಲು ವ್ಯಾಪಾರ-ವಹಿವಾಟುದಾರರು ವ್ಯಾಟ್‌, ಮಾರಾಟ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ತೆರಿಗೆ ಪಾವತಿ ವಿಳಂಬದಿಂದಾಗಿ ವಾಣಿಜ್ಯ ತೆರಿಗೆ ಇಲಾಖೆ ದಂಡ, ಬಡ್ಡಿ ವಿಧಿಸಿತ್ತು. ಬಳಿಕ ವ್ಯಾಪಾರ-ವ್ಯವಹಾರಸ್ಥರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು,

ಬಡ್ಡಿ, ದಂಡ ವಿನಾಯ್ತಿ ನೀಡಿ ಒಂದೇ ಬಾರಿಗೆ ಬಾಕಿ ತೆರಿಗೆ ಪಾವತಿಗೆ ಕರ ಸಮಾಧಾನ ಸೌಲಭ್ಯ ಕಲ್ಪಿಸಿದ್ದರು. ಕರ ಸಮಾಧಾನ ಸೌಲಭ್ಯ ಪಡೆಯಲು ಜೂ.30 ಕಡೆಯ ದಿನವಾಗಿತ್ತು. ಈಗ ಸರ್ಕಾರ ಜು.31ರವರೆಗೆ ಅವಧಿ ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ನಮ್ಮ ಮನವಿಯಂತೆ ವ್ಯಾಪಾರ-ವಹಿವಾಟುದಾರರ ಅನುಕೂಲಕ್ಕಾಗಿ ಕರ ಸಮಾಧಾನ ಸೌಲಭ್ಯ ಅವಧಿಯನ್ನು ಜು.31ರವರೆಗೆ ವಿಸ್ತರಿಸಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕಾಲಮಿತಿಯಲ್ಲಿ ಸೂಕ್ತ ಆದೇಶಗಳನ್ನು ಹೊರಡಿಸಬೇಕು. ವ್ಯಾಪಾರ-ವಹಿವಾಟುದಾರರು ಸೌಲಭ್ಯವನ್ನು ತ್ವರಿತವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಎಫ್ಕೆಸಿಸಿಐ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next