Advertisement
ನಗರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರ ಎಲ್ಲರೊಂದಿಗೆ ಚರ್ಚಿಸಿ ಸರ್ವ ಸಮ್ಮತವಾದ ಸಂಕಷ್ಟ ಸೂತ್ರ ಸಿದ್ಧಪಡಿಸಿ ಮುನ್ನಡೆಯಬೇಕೆಂದು ಹೇಳಿದರು.
Related Articles
Advertisement
ಮಾಜಿ ಸಚಿವ ಆರ್.ಅಶೋಕ್, ಶಾಸಕ ರವಿಸುಬ್ರಮಣ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಚೇತನ್‌ಗೌಡ, ಅಶೋಕ್‌ಜಯರಾಂ ಸೇರಿದಂತೆ ಮತ್ತಿತರರಿದ್ದರು.
ನೀರು ಬಿಟ್ಟು ಲೀಕೇಜ್ ನೀರು ಅಂತಾರೆ: ಅಶೋಕ್ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ಲೀಕೇಜ್ ನೀರು ಹೋಗುತ್ತಿದೆ ಎಂದು ಹೇಳುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಕಿಡಿಕಾರಿದರು. ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ಉಳಿವಿಗಾಗಿ ರೈತರ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕಾವೇರಿ ನೀರು ಬಳಸುವುದು ಬೆಂಗಳೂರಿಗರೇ ಹೆಚ್ಚು. ಒಂದು ದಿನ ನೀರು ಹೆಚ್ಚು ಕಮ್ಮಿ ಆದರೆ 50 ಕರೆಗಳು ಬರುತ್ತವೆ. ಮಂಡ್ಯ ಜನರು ವಿರೋಧ ಮಾಡದೇ ಇದ್ದಿದ್ದರೆ ಇನ್ನೂ ಅದೆಷ್ಟು ನೀರು ಹೋಗುತ್ತಿತ್ತೋ, ರೈತರ ಹೋರಾಟಕ್ಕೆ ಹೆದರಿ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ ಎಂದು ದೂರಿದರು. ಬೆಂಗಳೂರಿನವರು ಕಾವೇರಿ ಹೋರಾಟಕ್ಕೆ ಬರಬೇಕು. ಕುಡಿಯುವ ನೀರು ಇಲ್ಲ ಎಂದರೆ ಸಾಫ್ಟ್‌ವೇರ್, ಹಾರ್ಡ್‌ವೇರ್ ಕೆಲಸಕ್ಕೆ ಬರಲ್ಲ. ಜನವರಿ ನಂತರ ಇದೆ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ಕೆಆರ್‌ಎಸ್ ಇಲ್ಲದಿದ್ದರೆ ಬೆಂಗಳೂರು ಜನ ಬದುಕಲು ಸಾಧ್ಯವಿಲ್ಲ. ಮಂಡ್ಯ ರೈತರ ಹೋರಾಟಕ್ಕೆ ಬೆಂಗಳೂರಿಗರೂ ಸಾಥ್ ಕೊಡಬೇಕು ಎಂದು ಹೇಳಿದರು.