Advertisement
ಸುಳ್ಯ ಪುರಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ನಡೆದ 94ಸಿ ಮತ್ತು 94 ಸಿಸಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ವಿವಿಧ ಇಲಾಖಾ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಸಮುದಾಯದವರಿಗೂ ಈ ಸೌಲಭ್ಯ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನಿಲ ಭಾಗ್ಯದ ಸೌಲಭ್ಯವನ್ನು ವಿಸ್ತರಿಸಲಿದ್ದು, ಎಲ್ಲರಿಗೂ ಪ್ರಯೋಜನ ದೊರೆಯಲಿದೆ ಎಂದು ನುಡಿದರು.
ಕಾಲಕಾಲಕ್ಕೆ ಅಧಿಕಾರಕ್ಕೆ ಬಂದ ಸರಕಾರಗಳು ಜಾರಿಗೆ ತಂದ ಕಾರ್ಯ ಕ್ರಮಗಳು ಜನರ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆಗೆ ಪೂರಕವಾಗಿದೆ. 94ಸಿ ಮತ್ತು 94ಸಿಸಿ ಯೋಜನೆಗಳನ್ನು ಜಾರಿಗೆ ತಂದ ಕಾರಣ ಸರಕಾರಿ ಸ್ಥಳದಲ್ಲಿ ಮನೆ ಕಟ್ಟಿ ವಾಸ್ತವ್ಯ ಹೂಡಿದ ಲಕ್ಷಾಂತರ ಮಂದಿಯ ಸ್ವಂತ ಭೂಮಿಯ ಕನಸು ನನಸಾಗಿದೆ ಎಂದವರು ನುಡಿದರು.
ಕುಮ್ಕಿ, ಪರಂಬೋಕು, ಅರಣ್ಯ ಗಡಿಯ ಬಫರ್ ಸ್ಥಳದಲ್ಲಿ ಮನೆ ಕಟ್ಟಿದವರಿಗೂ ಹಕ್ಕು ಪತ್ರ ನೀಡಲು ನಿರ್ಧರಿಸಲಾಗಿದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಮಾತನಾಡಿ, ದುರ್ಬಲ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅನೇಕ ಯೋಜನೆಗಳು ಪೂರಕವಾಗಿದ್ದು, ಜನರ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.