ಲೋಕ ನಮ್ಮ ಅನುಭವಕ್ಕೆ ಬರುವುದು ನಾವು ಹೊಂದಿರುವ ಐದು ಗ್ರಹಣೇಂದ್ರಿಯ ಗಳ ಮೂಲಕ. ಅವು ಎಷ್ಟನ್ನು ಕಟ್ಟಿಕೊಡು ತ್ತವೆಯೋ ಅಷ್ಟು ನಮ್ಮ ಅನುಭವಕ್ಕೆ ನಿಲುಕುತ್ತದೆ. ಇದು ನಮ್ಮ ಮಿತಿ. ಈ ಮಿತಿಯನ್ನು ಮೀರುವುದಕ್ಕೆ ಸಾಧ್ಯವಿಲ್ಲವೇ? ಇದೆ ಎನ್ನು ತ್ತಾರೆ ಸದ್ಗುರು ಜಗ್ಗಿ ವಾಸುದೇವ್. ಸಾವ ಯವವಾದ ನಮ್ಮ ಪಂಚೇದ್ರಿಯಗಳ ಮಿತಿಯನ್ನು ಮೀರಿದರೆ ನಮ್ಮ ಬದುಕು ವಿಶಿಷ್ಟ ಸ್ತರದಲ್ಲಿ ಅರಳುತ್ತದೆ ಎನ್ನುತ್ತಾರೆ ಸದ್ಗುರು.
ಬದುಕು ಮತ್ತು ಸೃಷ್ಟಿಯ ವೈಶಾಲ್ಯವನ್ನು, ಅದರ ಆಳವನ್ನು ತಿಳಿದುಕೊಳ್ಳಬೇಕಿದ್ದರೆ ನಮ್ಮ ಗ್ರಹಣ ಶಕ್ತಿಯನ್ನು ಎತ್ತರಿಸಿಕೊಳ್ಳಬೇಕು. ಸೃಷ್ಟಿಯ ಗ್ರಹಿಕೆಯನ್ನು ಪಂಚೇದ್ರಿಯಗಳ ಮಿತಿಯಿಂದಾಚೆಗೆ ಎತ್ತರಿಸಿದಾಗ ಎಲ್ಲ ಸ್ತರಗಳಲ್ಲಿಯೂ ನಮ್ಮ ಜೀವನ ವಿಶೇಷ ಹೊಳಪು ಗಳಿಸುತ್ತದೆ.
ನಾವು ನಿದ್ದೆ ಮಾಡಿದಾಗ ನಮ್ಮ ಸುತ್ತ ನಡೆಯುತ್ತಿರುವ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗುತ್ತವೆ. ನಾವು ಜೀವಂತವಾಗಿರು ತ್ತೇವೆ, ಸುತ್ತಲಿನ ಜಗತ್ತು ಕೂಡ ಸಚೇತನ ವಾಗಿರುತ್ತದೆ. ಆದರೆ ನಮ್ಮ ಗ್ರಹಣೇಂದ್ರಿಯಗಳು ಅಚೇ ತನವಾಗಿರುತ್ತವೆ, ಆದ್ದ ರಿಂದ ನಿದ್ದೆ ಮಾಡುತ್ತಿರುವಾಗ ಸುತ್ತಲಿನ ಜಗತ್ತು ನಮ್ಮ ಅರಿವಿಗೆ ಬರುವುದಿಲ್ಲ. ದೃಷ್ಟಿ, ಆಘ್ರಾಣ, ಶ್ರವಣ, ಸ್ಪರ್ಶ, ರುಚಿ ಗ್ರಹಣ – ಈ ಐದು ಗ್ರಹಣ ಶಕ್ತಿಗಳ ಮೇಲೆ ಜಗತ್ತಿನ ಗ್ರಹಿಕೆ ನಿಂತಿದೆ ಎಂಬುದಕ್ಕೆ ಇದು ಉದಾಹರಣೆ. ಈ ಗ್ರಹಣೇಂದ್ರಿಯಗಳು ಯಾವುದು ಭೌತಿಕವಾಗಿ ಇದೆಯೋ ಅದನ್ನು ಮಾತ್ರ ಗ್ರಹಿಸಬಲ್ಲವು.
ಹಾಗಾಗಿ ಯಾವುದು ನಮ್ಮ ಗ್ರಹಿಕೆಗೆ ನಿಲುಕುವುದಿಲ್ಲವೋ ಅದು ನಮ್ಮ ಪಾಲಿಗೆ ಇಲ್ಲ. ನಮ್ಮ ಗ್ರಹಿಕೆಗೆ ನಿಲುಕಿದವುಗಳ ಬಗ್ಗೆ ಮಾತ್ರ ನಾವೇನಾದರೂ ಮಾಡಬಲ್ಲೆವು. ನಮ್ಮ ದೇಹವನ್ನೇ ತೆಗೆದುಕೊಂಡರೆ, ಹತ್ತು ಹಲವು ವಿಚಾರಗಳು ನಮ್ಮ ಗ್ರಹಿಕೆಗೆ ನಿಲುಕುವುದಿಲ್ಲ. ಐದು ಇಂದ್ರಿಯಗಳ ಗ್ರಹಿಕೆ ಗಿಂತ ಮೀರಿದ್ದೂ ಇದೆ ಎಂಬ ಅರಿವನ್ನು ಹೊಂದಿ, ನಮ್ಮ ಗ್ರಹಿಕೆಯನ್ನು ಆ ಎತ್ತರಕ್ಕೆ ಏರಿಸಲು ಪ್ರಯತ್ನಿಸಿದರೆ ನಮ್ಮ ಬದುಕು ಕೂಡ ಹೊಸ ಎತ್ತರಕ್ಕೆ ಏರುತ್ತದೆ.
ಗ್ರಹಿಕೆಯನ್ನು ವಿಸ್ತರಿಸುವುದು ಎನ್ನುವು ದನ್ನು ಸಣ್ಣ ಉದಾಹರಣೆಯ ಮೂಲಕ ನೋಡೋಣ. ನಮ್ಮ ಮುಂದೆ ಅನ್ನವಿರುವ ಬಟ್ಟಲು ಇದೆ ಎಂದುಕೊಳ್ಳಿ. ಪಂಚೇದ್ರಿಯ ಗಳ ಗ್ರಹಿಕೆಯಷ್ಟೇ ಆದರೆ ಅನ್ನ ಕಾಣುತ್ತದೆ, ಅದರ ಪರಿಮಳ ತಿಳಿಯುತ್ತದೆ, ಮುಟ್ಟಿದರೆ ಬಿಸಿಯೋ ತಣ್ಣನೆಯೋ ಗೊತ್ತಾಗುತ್ತದೆ. ಇದಿಷ್ಟರಾಚೆಗೆ ನಮ್ಮ ಗ್ರಹಿಕೆಯನ್ನು, ಅರಿವನ್ನು ವಿಸ್ತರಿಸುವುದು ಎಂದರೆ, ಆ ಅನ್ನವು ಅನ್ನನಾಳದ ಮೂಲಕ ಜಠರಕ್ಕೆ ಇಳಿದು, ಜೀರ್ಣರಸದಲ್ಲಿ ದಗ್ಧಗೊಂಡು, ಬಳಿಕ ಶಕ್ತಿಯಾಗಿ ದೇಹದ ನಾನಾ ಭಾಗಗಳ ಜೀವಕೋಶಗಳತ್ತ ಸಾಗು ವುದು, ಅಲ್ಲಿ ಚಯಾಪಚಯ ಕ್ರಿಯೆಯ ಮೂಲಕ ನಮ್ಮ ದೇಹವನ್ನು ಮುನ್ನಡೆಸುವ ಇಂಧನವಾಗಿ ಕೆಲಸ ಮಾಡುವುದನ್ನು ಆದ್ಯಂತ ವಾಗಿ ಗ್ರಹಿಸುವುದು. ಈ ಅರಿವು ನಮ್ಮಲ್ಲಿದ್ದರೆ ಪ್ರತೀ ದಿನ ನಾವು ಉಣ್ಣುವ ಆಹಾರವು ದೇಹಕ್ಕೂ ಮನಸ್ಸಿಗೂ ಸಾಧು ವಾದುದೇ ಎಂಬುದನ್ನು ಗ್ರಹಿಸುವುದಾಗುತ್ತದೆ. ಅದು ಯಾವುದು ವಿಹಿತ, ಯಾವುದು ವಿಹಿತವಲ್ಲ ಎಂಬ ಅರಿವನ್ನು ಕೊಡುತ್ತದೆ. ಆಗ ಆಹಾರದ ಯೋಗ್ಯ ಆಯ್ಕೆ ನಮ್ಮಿಂದ ಸಾಧ್ಯವಾಗುತ್ತದೆ. ಅಂತಿಮವಾಗಿ ಇದು ದೇಹ ಮತ್ತು ಮನಸ್ಸನ್ನು ಹೊಸದೊಂದು ಮಟ್ಟಕ್ಕೆ ಒಯ್ಯುತ್ತದೆ. ಇದೇ ಸೂತ್ರವನ್ನು ಬದುಕಿನ ಪ್ರತಿಯೊಂದು ಆಯಾಮಕ್ಕೂ ಅನ್ವಯಿಸಿ ನೋಡಿ.
ಪಂಚೇಂದ್ರಿಯಗಳ ಆಚೆಗಿನದನ್ನು ಗ್ರಹಿ ಸುವ ಈ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಆದರೆ ಧಾವಂತದ ಬದುಕಿನಲ್ಲಿ ಅದನ್ನು ಉಪ ಯೋಗಿಸಿಕೊಳ್ಳುವ ವ್ಯವಧಾನವನ್ನು ಕಳೆದು ಕೊಂಡಿದ್ದೇವೆ. ನಿಮ್ಮೊಳಗನ್ನು ಅರಿತು ಕೊಳ್ಳುತ್ತ ಗ್ರಹಿಕೆಯನ್ನು ವಿಸ್ತರಿಸುವುದಕ್ಕಾಗಿ ದಿನವೂ ಸ್ವಲ್ಪ ಹೊತ್ತನ್ನು ಮೀಸಲಿಡಿ. ನಿಮ್ಮ ಬದುಕು ಹೊಸ ಅರ್ಥದೊಂದಿಗೆ ಬಿರಿಯುವುದನ್ನು ಕಾಣುವಿರಿ.
( ಸಾರ ಸಂಗ್ರಹ)