Advertisement
ಬೈಂದೂರು, ಕೊಲ್ಲೂರು ಹಾಗೂ ಕುಂದಾಪುರಕ್ಕೆ ಸಾಗುವ ಮುಖ್ಯ ಜಂಕ್ಷನ್ ಹಾಲ್ಕಲ್ ಆಗಿದೆ. ಇಲ್ಲಿ ಹಲವು ವರ್ಷಗಳಿಂದ ಕಿರಿದಾದ ರಸ್ತೆಯ ನಡುವೆ ಅಮಿತ ವೇಗದಿಂದ ಸಾಗುವ ವಾಹನಗಳಿಂದಾಗಿ ಅಪಘಾತವಾಗುತ್ತಿತ್ತು. ಈ ಬಗ್ಗೆ ಉದಯವಾಣಿ ಸಚಿತ್ರ ವರದಿಯೊಡನೆ ಇಲಾಖೆಯ ಗಮನ ಸೆಳೆದಿತ್ತು.
ಕೊಲ್ಲೂರು ಕ್ಷೇತ್ರಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ನಾನಾ ಕಡೆಯಿಂದ ಆಗಮಿಸುತ್ತಾರೆ. ಅಗಲ ಕಿರಿದಾದ ಘಾಟಿ ಆರಂಭದ ಈ ಹಾದಿಯು, ಹೊಸತಾಗಿ ಬರುವ ವಾಹನ ಚಾಲಕರಿಗೆ ಗೊಂದಲ ಉಂಟು ಮಾಡುತ್ತಿತ್ತು. ಮೂರು ಗ್ರಾಮಗಳನ್ನು ಜೋಡಿಸುವ ಹಾಲ್ಕಲ್ ಜಂಕ್ಷನ್ ಇದೀಗ ವಿಸ್ತಾರ ಗೊಂಡಿದ್ದು ಯೋಗ್ಯ ಮಾರ್ಗವಾಗಿ ರೂಪ ಗೊಂಡಿದೆ. ರಸ್ತೆ ವಿಸ್ತರಣೆಗೊಂಡು ಡಾಮರು ಮಾಡಲಾಗಿದ್ದು, ವೇಗದ ಮಿತಿಗೆ ರಸ್ತೆ ಉಬ್ಬು ನಿರ್ಮಿಸಲಾಗಿದ್ದು ವೇಗಕ್ಕೆ ಕಡಿವಾಣ ಹಾಕಿದೆ. ಹೆಮ್ಮಾಡಿ-ಕೊಲ್ಲೂರು ತಿರುವು ವಿಸ್ತರಣೆ
ಹೆಮ್ಮಾಡಿಯಿಂದ ಕೊಲ್ಲೂರು ತನಕ ಅಪಘಾತ ವಲಯವನ್ನು ತೆರವುಗೊಳಿಸಿ ವಿಸ್ತರಣೆ ಮಾಡಿದ್ದು ಪ್ರಯೋಜನಕಾರಿಯಾಗಿದೆ. ಹೆಮ್ಮಾಡಿ, ದೇವಲ್ಕುಂದ ಸಹಿತ ನೆಂಪು, ಚಿತ್ತೂರು, ಈಡೂರು, ಜಡ್ಕಲ್, ಹಾಲ್ಕಲ್‌ನಲ್ಲಿ ವಿಸ್ತರಣೆ ಕಾಮಗಾರಿ ಪೂರ್ಣ ಗೊಂಡಿದೆ.