Advertisement

ವ್ಯಾಯಾಮಕ್ಕೆ ಸೂಕ್ತ ಅಪ್ರೈಟ್ ಬೈಕ್‌

12:23 AM Jul 23, 2019 | mahesh |

ವಿವಿಧ ನಮೂನೆಯ ವ್ಯಾಯಾಮ ಸಲಕರಣೆಗಳ ಪೈಕಿ ಅಪ್ರೈಟ್ ಬೈಕ್‌ ಸಾಧನ ಒಂದು. ಈ ಅಪ್ರೈಟ್ ಬೈಕ್‌ ಸಾಧನ ಮನೆಯಲ್ಲೂ ಬಳಸಬಹುದು. ಇದು ದೇಹದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಪ್ರೈಟ್ ಬೈಕ್‌ಗಳಲ್ಲಿ ಅತ್ಯಂತ ಸುಧಾರಿತ ಸಾಧನಗಳಿವೆ. ಎಷ್ಟು ಸಮಯ ವ್ಯಾಯಾಮ ಮಾಡಿದ್ದೀರಿ, ದೇಹದಲ್ಲಿ ಎಷ್ಟು ಕೊಬ್ಬಿನಂಶ (ಕ್ಯಾಲೋರಿ ಬರ್ನ್) ಕರಗಿದೆ ಎನ್ನುವುದನ್ನೂ ಈ ಸಾಧನದ ಮೇಲ್ಭಾಗದಲ್ಲಿ ಅಳವಡಿಸಿರುವ ಎಲ್ಇಡಿ ಪರದೆ ತೋರಿಸುತ್ತಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಆವಶ್ಯಕತೆಗೆ ಅನುಗುಣವಾಗಿ ಇದನ್ನು ಹೊಂದಿಸಿಕೊಳ್ಳಬಹುದು.

ಸಾಧನ ಬಳಸುವಾಗಗಮನಿಸಬೇಕಾದ ಅಂಶ‌
·ಅಪ್ರೈಟ್ ಬೈಕ್‌ ಮೇಲೆ ಕುಳಿತುಕೊಂಡಾಗ ಮೊಣಕಾಲು ಮತ್ತು ಪಾದಗಳು 90 ಡಿಗ್ರಿ ರೀತಿಯಲ್ಲಿರಲಿ. ಈ ಹಂತದಲ್ಲಿ ಪಾದಗಳು ಸಮತಟ್ಟಾಗಿರುವಂತೆ ನೋಡಿಕೊಳ್ಳುವುದು.
Advertisement

·ಸಾಧನದ ಹಿಡಿಕೆಯನ್ನು ಭುಜಕ್ಕೆ ನೇರವಾಗಿ ಹೊಂದಿಸಿಕೊಳ್ಳುವುದು

·ಸೀಟ್ ಅನ್ನು ಮುಂದಕ್ಕೆ ಹೊಂದಿಸಿಕೊಂಡಿರಿ.

·ಈ ಸಾಧನವನ್ನು ಬಳಸುವಾಗ ಮುಖ್ಯವಾಗಿ ಬೆನ್ನಿನ ಭಾಗ ನೇರವಾಗಿರಲಿ. ಬೆನ್ನು ಬಗ್ಗಿಸಿದರೆ ಬೆನ್ನಿನ ನೋವು ಸುಧಾರಣೆಯಾಗುವುದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

·ಪಾದಗಳು ಸಾಧನಕ್ಕೆ ಸರಿ ಹೊಂದಿಸಿಕೊಂಡ ಮೇಲೆ 25ಡಿಗ್ರಿ ರಿಂದ 30 ಡಿಗ್ರಿ (ಅಂದಾಜು) ಅಂತರವಿರಲಿ.

Advertisement

ಸುಧಾರಿತ ಜೀವನ
ಈ ಸಾಧನ ಕುಳಿತು ಸೈಕಲ್ ಓಡಿಸುವಂತೆಯೇ ಇದ್ದು, ಸೈಕಲ್ ತುಳಿಯುವಾಗ ದೇಹದ ವಿವಿಧ ಅಂಗಗಳಿಗೆ ಸಹಾಯವಾಗುವಂತೆ ಈ ಸಾಧನ ಬಳಕೆಯೂ ಅದೇ ತರಹದ ಅನುಕೂಲವಾಗುವುದು. ಬೆನ್ನು ಮೂಳೆಯ ಸದೃಢ‌ತೆಗೂ ಇದು ಸಹಾಯಕವಾಗಿದೆ.

ಹೊಟ್ಟೆ ಬೊಜ್ಜು ಮತ್ತು ಬೆನ್ನು ನೋವಿಗೆ ಅಪ್ರೈಟ್ ಬೈಕ್‌ ಸಾಧನ ಸಹ ಅತ್ಯಂತ ಪರಿಣಾಮಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next