Advertisement
ರಾಘವೇಂದ್ರ ರಾವ್ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತರರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಎಲ್ಲರೊಂದಿಗೆ ಬೆರೆತಾಗ ಮಾತ್ರ ನಮ್ಮ ಜೀವನ ರಸಮಯವಾಗಿರುತ್ತದೆ. ಯಶಸ್ಸು ಸಾಧಿಸಲು ಕೇವಲ ಕನಸು ಮಾತ್ರ ಸಾಲದು ಅದರೊಂದಿಗೆ ಪರಿಶ್ರಮ ಇದ್ದಾಗ
ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿಯೇ ಯಶಸ್ಸಿನ ಮೆಟ್ಟಿಲನ್ನು ಹತ್ತುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕುಮಾರ್, ಡಾ| ಜಯಶ್ರೀ, ಶ್ರೀನಾಥ್ ರಾವ್ ಮುಕ್ಕ ಹಾಗೂ ಕಾಲೇಜು ಸಿಬಂದಿ ಉಪಸ್ಥಿತರಿದ್ದರು. ಉಪಕುಲಪತಿ ಡಾ| ಪಿ.ಎಸ್. ಐತಾಳ ಸ್ವಾಗತಿಸಿ, ಡಾ| ಅಜಯ್ ಕೆ.ಜಿ. ವಂದಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.