Advertisement

ಬಲಿಷ್ಠ ಸ್ನಾಯುಗಳಿಗೆ ವ್ಯಾಯಾಮಾಭ್ಯಾಸ

12:48 AM Nov 12, 2019 | Sriram |

ಬಲಿಷ್ಠ ಸ್ನಾಯುಗಳನ್ನು ಹೊಂದುವ ಮೂಲಕ ಫಿಟ್‌ ಆಗಿರಲು ಹೆಚ್ಚಿನ ಯುವಕರು ಆಶಿಸುತ್ತಾರೆ. ಕೆಲವರು ಆಹಾರದ ಮೂಲಕ ದೇಹದ ಸದೃಢತೆಯನ್ನು ಕಾಪಾಡಿಕೊಂಡರೆ ಮತ್ತೂ ಕೆಲವರು ವ್ಯಾಯಾಮಾಭ್ಯಾಸ ಫಿಟ್ನೆಸ್ ಅಭ್ಯಾಸಗಳ ಕಡೆ ಮುಖ ಮಾಡುತ್ತಾರೆ ಅಂತಹ ಕೆಲ ವ್ಯಾಯಾಮಗಳು ಇಲ್ಲಿವೆ.

Advertisement

ಸಮಾನಾಂತರ ಸರಳು
ಹಿಂದೆ ಪ್ಯಾರಲಲ್‌ ಬಾರ್‌ ಎಂದರೆ ಕೇವಲ ಜಿಮ್ನಾಸ್ಟ್‌ ಗಳು ಉಪಯೋಗಿಸುವುದು ಎಂದು ತಿಳಿದಿದ್ದೆವು. ಅದರೆ ಇದೆ ಸಾಧನವನ್ನು ಬಳಸಿ ದೇಹದ ಮೇಲ್ಭಾಗದ ಖಂಡಗಳು ಹುರಿಗಟ್ಟಿಸುವಂತೆ ಮಾಡಬಹುದು. ರಟ್ಟೆಯ ಮುಂಭಾಗ ಮತ್ತು ಹಿಂಭಾಗದ ಸ್ನಾಯುಗಳು ಅತಿ ಹೆಚ್ಚಾಗಿ ಹುರಿಗಟ್ಟುತ್ತವೆ. ಜತೆ ಜತೆಗೆ ಭುಜದ ಮತ್ತು ಎದೆಯ ಸ್ನಾಯುಗಳೂ ಹುರಿಗಟ್ಟುತ್ತವೆ. ಈ ವಿಧಾನದಲ್ಲಿ ಮೊಣಕಾಲುಗಳನ್ನು ಮಡಚಬಾರದು, ಬಾಗಲೂಬಾರದು. ಹೀಗೆ ಮಾಡಿದರೆ ವ್ಯಾಯಾಮದಿಂದ ಹೆಚ್ಚಿನ ಪ್ರಯೋಜನವಿಲ್ಲ.

ಮೊಣಕಾಲು ಎದೆಮಟ್ಟಕ್ಕೆ
ಬರುವಷ್ಟು ಕಾಲನ್ನು ಎತ್ತುವುದು
ಕೊಬ್ಬು ಕರಗಿಸಲು ಹೈ ನೀ ಆ್ಯಕ್ಷನ್‌ ವ್ಯಾಯಾಮ ಅತ್ಯುತ್ತಮವಾಗಿದೆ. ಸಾಧಾರಣವಾಗಿ ಕೊಬ್ಬು ಹೊಟ್ಟೆಯ ಮತ್ತು ಸೊಂಟದ ಸುತ್ತ ಹೆಚ್ಚಾಗಿ ಶೇಖರವಾಗಿರುವುದರಿಂದ ಈ ವ್ಯಾಯಾಮದಿಂದ ಅಲ್ಲಿನ ಕೊಬ್ಬು ಕರಗಿ ಆಕರ್ಷಕ ಮೈಕಟ್ಟು ಪಡೆಯಲು ನಿಮಗೆ ನೆರವಾಗುತ್ತದೆ. ಹೊಟ್ಟೆಯ ಸ್ನಾಯುಗಳೂ ಈ ವ್ಯಾಯಾಮದಿಂದ ಹೆಚ್ಚು ಹುರಿಗಟ್ಟುತ್ತವೆ. ಈ ವ್ಯಾಯಾಮವನ್ನು ಪ್ರಾರಂಭದಲ್ಲಿ ಮಾಡಿ ಉಳಿದ ತೂಕ ಉಪಯೋಗಿಸುವ ವ್ಯಾಯಾಮಗಳನ್ನು ಅನಂತರ ಮಾಡಿದರೆ ಒಳಿತು. ಆದರೆ ಪ್ರತಿದಿನವೂ ಇದನ್ನು ಮಾಡುವುದು ಅಗತ್ಯ.

ಟೈರ್‌ ವಕೌìಟ್‌
ಟೈರ್‌ ವಕೌìಟ್‌ ವ್ಯಾಯಾಮವು ಟ್ರ್ಯಾಕ್ಟರ್‌ ಎಂಜಿನ್‌ ದೊಡ್ಡ ಟೈರ್‌ಗಳನ್ನು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ಬೀಳಿಸುವ ಕಸರತ್ತು ಶೋಲ್ಡರ್‌ ಸ್ಟ್ರೆಂಥ್‌ಗೆ ಇದು ಸಹಕಾರಿ. ಬೆನ್ನಿನ ಕೆಲ ಭಾಗಕ್ಕೂ ಉತ್ತಮ ವ್ಯಾಯಾಮವಾಗಿದೆ.

 - ಕಾರ್ತಿಕ್‌ ಚಿತ್ರಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next