Advertisement
ವಾಕಿಂಗ್, ಜಾಗಿಂಗ್, ನಿಧಾನ ಓಟ: ಗಂಟುನೋವು, ಬ್ಯಾಲೆನ್ಸ್ ಸಮಸ್ಯೆ ಇರುವವರಿಗೆ ಸರಳ ನಡಿಗೆ ಒಂದು ಉತ್ತಮ ವ್ಯಾಯಾಮ. ವಾಕಿಂಗ್‌ನಿಂದ ಕೊಬ್ಬು ಕರಗುತ್ತದೆ. ಸ್ಥಿತಿಸ್ಥಾಪಕತ್ವ ಗುಣ (ಉಲ್ಲಾಸಶೀಲತೆ) ಹೆಚ್ಚಾಗುತ್ತದೆ. ಆರೋಗ್ಯವಾಗಿರಲು ಮುಂಜಾನೆ ಮತ್ತು ಸಂಜೆಯ ನಡಿಗೆ ರೂಢಿಸಿಕೊಳ್ಳುವುದು ಉತ್ತಮ. ಜಾಗಿಂಗ್, ನಿಧಾನ ಓಟ ಹೃದಯದ ಆರೋಗ್ಯಕ್ಕೆ ಪೂರಕವಾಗುತ್ತದೆ.
ಕುಳಿತು ಏಳುವ ವ್ಯಾಯಾಮ: ಕುರ್ಚಿಯ ಮೇಲೆ ಕುಳಿತು ತತ್‌ಕ್ಷಣ ಎದ್ದು ನಿಲ್ಲುವ ಪ್ರಕ್ರಿಯೆ ಇದು. ಸ್ಥಿರ (ಒಂದು ಹಂತದ) ವೇಗದೊಂದಿಗೆ ಆರಂಭಿಸಿ ಕ್ರಮೇಣ ನಿಮ್ಮ ಅನುಕೂಲಕ್ಕೆ ತಕ್ಕಂತೆ ವೇಗ ಹೆಚ್ಚಿಸಿ. ಹೀಗೆ ಸಾಕಷ್ಟು ಬಾರಿ ಮಾಡಿ. ಇದರಿಂದ ಕಾಲಿನ ಮಾಂಸಖಂಡಗಳು ಬಲಗೊಳ್ಳುತ್ತವೆ. ಯೋಗ: ಉಸಿರಿನ ನಿಯಂತ್ರಣ ಮತ್ತು ವಿಶ್ರಾಂತಿಯ ಮೂಲಕ ಆರೋಗ್ಯ ವರ್ಧನೆಯ ಉದ್ದೇಶ ಹೊಂದಿರುವವರಿಗೆ ಯೋಗ, ಧ್ಯಾನ ಸಹಕಾರಿ. ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಸಾಧಿಸಲು ಯೋಗ ನೆರವಾಗುತ್ತದೆ. ಒತ್ತಡ ದೂರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
Related Articles
Advertisement
ನೃತ್ಯ: ಲೈವಿ ಆದ ವ್ಯಾಯಾಮ. ಇದಕ್ಕೆ ಪ್ರಚಂಡ ನೃತ್ಯಪಟುವಾಗಬೇಕಿಲ್ಲ. ಸಂಗೀತಕ್ಕೆ ಲಘುವಾಗಿ ನೃತ್ಯ ಮಾಡುವುದರಿಂದ ದೇಹ ಉಲ್ಲಸಿತವಾದೀತು. ಕ್ಯಾಲೊರಿ ಕರಗಲು ನೃತ್ಯ ಸಹಕಾರಿ.
ನಗು: ಎಲ್ಲ ರೀತಿಯ ಕಾಯಿಲೆ, ನೋವುಗಳಿಗೆ ನಗು ಒಂದು ಅತ್ಯುತ್ತಮ ಔಷಧದಂತೆ. ಲಾಫಿಂಗ್ ಕ್ಲಬ್‌ಗಳು ಈಗ ಪ್ರಸಿದ್ಧ. ಹಾಸ್ಯದ ಸನ್ನಿವೇಶಗಳಿರುವ ಡಿವಿಡಿ ಬಳಸಿ, ಸ್ಮಾರ್ಟ್‌ಫೋನ್ ಮೂಲಕ ಹಾಸ್ಯ, ವಿನೋದಾವಳಿಗಳನ್ನು ನೋಡುತ್ತ ಬಾಯ್ತುಂಬ ನಗುವುದು ಆರೋಗ್ಯಕ್ಕೆ ಉತ್ತಮ. ಒತ್ತಡ ನಿವಾರಣೆಯಾಗುತ್ತದೆ.
ಸೈಕ್ಲಿಂಗ್: ಸೈಕಲ್ ಸವಾರಿಯಿಂದ ಮಾಂಸಖಂಡಗಳು ಬಲಗೊಳ್ಳುತ್ತವೆ. ಹೃದಯಕ್ಕೂ ಉತ್ತಮ. ಮಾನಸಿಕ ಆರೋಗ್ಯಕ್ಕೂ ಪೂರಕ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
– ಎಸ್ಕೆ