Advertisement

ಟೋಲ್ ವಿನಾಯಿತಿ ನೀಡಿ

02:52 PM May 31, 2019 | Suhan S |

ಹಾವೇರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ವಸೂಲಿ ಮಾಡುತ್ತಿರುವ ಟೋಲ್ ಸಂಗ್ರಹ ರದ್ದು ಪಡಿಸುವಂತೆ ಒತ್ತಾಯಿಸಿ ಜೆಡಿಎಸ್‌ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ ಮಾತನಾಡಿ, ಹಾವೇರಿ ನಗರದಿಂದ 5 ಕಿಮೀ ಹತ್ತಿರದ ಆಲದಕಟ್ಟಿ ಗ್ರಾಮದ ಬಳಿ ಟೋಲ್ಗೇಟ್ ನಿರ್ಮಿಸಿದ್ದು, ನಿತ್ಯ ಸಂಚರಿಸುವ ಕೆಎಸ್‌ಆರ್‌ಟಿ ಬಸ್‌ಗಳಿಂದ ಟೋಲ್ ಸಂಗ್ರಹಣೆ ಅವೈಜ್ಞಾನಿಕವಾಗಿದೆ. ಹಾವೇರಿ ನಗರದಿಂದ ದೇವಿಹೊಸೂರು ಗ್ರಾಮವು ಸುಮಾರು 8 ಕಿಮೀ ದೂರದಲ್ಲಿದ್ದು, ನಿತ್ಯವು ಹಾವೇರಿ ನಗರದಿಂದ ದೇವಿಹೊಸೂರು ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು 11 ಟ್ರಿಪ್‌ ಸಂಚರಿಸುತ್ತವೆ. ಪ್ರತಿ ಟ್ರಿಪ್‌ಗೆ 105 ರೂ.ಗಳಂತೆ ಒಂದು ದಿನಕ್ಕೆ 11 ಟ್ರೀಪ್‌ಗ್ಳಿಗೆ 1155 ರೂ.,ಗಳನ್ನು ಕೆಎಸ್‌ಆರ್‌ಟಿಸಿಯ ಮೂಲಕ ಟೋಲ್ ಸಂಗ್ರಹವಾಗುತ್ತದೆ. ಇದರಂತೆ ಇತರೆ ಹಳ್ಳಿಗಳಾದ ಕಬ್ಬೂರ, ಹೊಸೂರ ತಾಂಡಾ, ತಿಳವಳ್ಳಿ, ಸಂಗೂರ, ಉಪ್ಪಣಸಿ, ಕೆಲವರಕೊಪ್ಪ, ಕೂಸನೂರು, ಹಿರೇಹುಲ್ಲಾಳ, ಪಿ.ಜಿ. ಸೆಂಟರ್‌, ತಿಮ್ಮಾಪುರ, ಕುಳೇನೂರ, ಬೆಳಗಾಲಪೇಟೆ, ಬೊಮ್ಮನಹಳ್ಳಿ, ಬೆಂಚಿಹಳ್ಳಿ, ಹಾನಗಲ್ಲ, ಶಿರಸಿ ಮುುಂತಾದ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ದಿನಕ್ಕೆ 100ಕ್ಕೂ ಹೆಚ್ಚು ಟ್ರೀಪ್‌ಗ್ಳಿಂದ ಸುಮಾರು 10 ಸಾವಿರ ಗಿಂತ ಅಕ ಟೋಲ್ ಸಂಗ್ರಹವಾಗುತ್ತದೆ. ಈ ಹಣವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರ ಮೇಲೆಯೇ ವಿಸುತ್ತಾರೆ. ಮೊದಲು ದೇವಿಹೊಸೂರ ಗ್ರಾಮಕ್ಕೆ ಪ್ರಯಾಣ 10 ರು., ಇತ್ತು ಈಗ 13 ರೂ. ಗೆ ಏರಿಸಲಾಗಿದೆ ಎಂದರು.

ಹಾವೇರಿ ನಗರಕ್ಕೆ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಬರುವ ಪ್ರಯಾಣಿಕರಲ್ಲಿ ವಿದ್ಯಾರ್ಥಿಗಳು, ಬಡ ರೈತವರ್ಗ, ಬಡ ಕೂಲಿಕಾರ್ಮಿಕರು, ಕಟ್ಟಡದ ಕಾರ್ಮಿಕರು, ಇತರೆ ಕ್ಷೇತ್ರಗಳಲ್ಲಿ ದಿನನಿತ್ಯ ದುಡಿಯುವ ಕಾರ್ಮಿಕರು ಇವರಿಂದ ದಿನನಿತ್ಯ ಹೋಗಿ ಬರುವ ಪ್ರಯಾಣದ ದರದಲ್ಲಿ ಹೆಚ್ಚಳವಾಗಿದ್ದರಿಂದ ಹೊರೆಯಾಗುತ್ತಿದೆ. ಕೂಡಲೇ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಟೋಲ್ ಸಂಗ್ರಹದಿಂದ ವಿನಾಯಿತಿ ನೀಡುವಂತೆ ಹಾಗೂ ಪ್ರಯಾಣ ದರ ಇಳಿಕೆ ಮಾಡುಂತೆ ಜಿಲ್ಲಾಕಾರಿಗಳು ಸಂಬಂಧಪಟ್ಟ ಅಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಟೋಲ್ಗೇಟ್ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು. ಪಕ್ಷದ ಮುಖಂಡರಾದ ಎಸ್‌.ಎಸ್‌. ಕಳ್ಳಿಮನಿ, ಎಂ.ಬಿ. ಸಾವಜ್ಜಿಯವರ, ಶಿವಕುಮಾರ ಮಠದ, ಎಸ್‌.ಎಲ್.ಕಾಡದೇವರಮಠ, ಮಹಾಂತೇಶ ಬೇವಿನಹಿಂಡಿ, ಮಲ್ಲಿಕಾರ್ಜುನ ಆರಾಧ್ಯಮಠ, ಪರಶುರಾಮ ಗುಳಪ್ಪನವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next