ನಗರ ಅರಣ್ಯ ವ್ಯಾಪ್ತಿಯ ತರಬೇತಿ ಅರಣ್ಯ ರಕ್ಷಕರಿಗೆ ವಿವಿಧ ಕ್ಲಿಷ್ಟಕರ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯ ಬಗ್ಗೆ ಬೋಧನೆ ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.
Advertisement
ಕೊಡಗಿನ ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಯಾಗಿರುವ 54 ಅರಣ್ಯ ರಕ್ಷಕರು ಬಂಡೀಪುರ ಹುಲಿ ಯೋಜನೆಯಲ್ಲಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ತರಬೇತಿ ಪಡೆಯಲು ಪ್ರವಾಸಕ್ಕೆಆಗಮಿಸಿದ್ದಾರೆ. ಇವರಿಗೆ ಗೋಪಾಲಸ್ವಾಮಿ ಬೆಟ್ಟವಲಯಾರಣ್ಯ ಕಚೇರಿಯಲ್ಲಿ ಇಲಾಖೆಯ ಕಾರ್ಯ ನಿರ್ವಹಣೆಯ ಬಗ್ಗೆ ಸಂವಾದ ನಡೆಸುವ ಮೂಲಕ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ ವಿವರಣೆ
ನೀಡಿದರು.
ಬೆಂಕಿ ಬಿದ್ದರೆ ಅಗ್ನಿಶಾಮಕ ದಳದ ನೆರವಿನಿಂದ ಆರಿಸುವುದು, ಮಾನವ ವನ್ಯಜೀವಿ ಸಂಘರ್ಷ ಸಂದರ್ಭದಲ್ಲಿ ನಡೆದುಕೊಳ್ಳುವ ವಿಧಾನಗಳು. ಬಂಡೀಪುರದಲ್ಲಿ ಬೇಸಿಗೆ ಸಂದರ್ಭದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸೋಲಾರ್ ಮೋಟಾರ್ ಮೂಲಕ ನೀರೊದಗಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅರಣ್ಯ ಅಪರಾಧಗಳು ನಡೆದಾಗ ರಾಣಾ ಹೆಸರಿನ ಷಫರ್ಡ್ ನಾಯಿ ನೆರವಿನಿಂದ ಆರೋಪಿಗಳ
ಪತ್ತೆ, ಕಾಡಂಚಿನ ಜನರಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಸಂಕಷ್ಟ ಸಂದರ್ಭದಲ್ಲಿ ಸಹಕಾರ ಪಡೆಯುವ ಮುಂತಾದ ಕ್ರಮಗಳ ಬಗ್ಗೆ ವಿವರಿಸಿ ಅವರ ಅನುಮಾನಗಳಿಗೆ ಉತ್ತರ ನೀಡಿದರು.
Related Articles
ಸಸ್ಯವರ್ಗಗಳ ಅಧ್ಯಯನ ನಡೆಸಿದರು.
Advertisement
ಬಸವರಾಜು ಎಂಬ ತರಬೇತಿ ಅರಣ್ಯ ರಕ್ಷಕ ಮಾತನಾಡಿ, ಉತ್ತರ ಕರ್ನಾಟಕದಲ್ಲಿನ ಹೆಚ್ಚಿನ ಯುವಕರು ಆಸಕ್ತಿಯಿಂದ ಅರಣ್ಯ ಸೇವೆಯಲ್ಲಿ ಸೇರಲು ಬಯಸುತ್ತಿದ್ದಾರೆ. ಅವರಿಗೆ ಪರಿಸರದ ಮೇಲಿರುವ ಪ್ರೀತಿ ಕಾರಣ ಎಂದರು.
ಈ ಸಂದರ್ಭದಲ್ಲಿ ಕುಶಾಲನಗರ ತರಬೇತಿ ವಿಭಾಗದ ಆರ್‌ಎಫ್ಒ ರಾಘವೇಂದ್ರ,ಗೋಪಾಲಸ್ವಾಮಿಬೆಟ್ಟ ವಲಯದ ಡಿಆರ್ ಎಫ್ಒಗಳಾದ ಅನಿಲ್ ಕುಮಾರ್, ಪ್ರತಾಪರೆಡ್ಡಿ, ಇತರರು ಉಪಸ್ಥಿತರಿದ್ದರು.