Advertisement

ಗೆಳತಿಯ ಜಾಮೀನಿಗಾಗಿ ಜೋಡಿ ಕೊಲೆ ಮಾಡಿದ್ದಾತನಿಗೆ ಚುಚ್ಚುಮದ್ದಿನ ಮೂಲಕ ಮರಣದಂಡನೆ!

11:07 AM Jan 28, 2022 | Team Udayavani |

ವಾಷಿಂಗ್ಟನ್: ಜೋಡಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಗುರುವಾರ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ನೀಡಲು ನಿರ್ಧರಿಸಲಾಗಿದೆ. ಈ ವರ್ಷ ಅಮೆರಿಕದಲ್ಲಿ ಮರಣದಂಡನೆಗೊಳಗಾದ ಮೊದಲ ಪ್ರಕರಣವಾಗಿರಲಿದೆ.

Advertisement

2001ರಲ್ಲಿ ಆಗ 25 ವರ್ಷ ವಯಸ್ಸಿನ ಡೊನಾಲ್ಡ್ ಗ್ರಾಂಟ್, ಜೈಲಿನಲ್ಲಿರುವ ತನ್ನ ಗೆಳತಿಗೆ ಜಾಮೀನು ಕೊಡಿಸಲು ಬೇಕಾದ ಹಣವನ್ನು ಕದಿಯಲು ಹೋಟೆಲ್ ನಲ್ಲಿ ದರೋಡೆ ಮಾಡಿದ್ದ. ದರೋಡೆ ವೇಳೆ ಇಬ್ಬರು ಹೋಟೆಲ್ ಉದ್ಯೋಗಿಗಳ ಮೇಲೆ ಡೊನಾಲ್ಡ್ ಗುಂಡು ಹಾರಿಸಿದ್ದ. ನ್ಯಾಯಾಲಯದ ದಾಖಲೆಗಳ ಪ್ರಕಾರ ಒಬ್ಬರು ತಕ್ಷಣವೇ ಸತ್ತರು, ಮತ್ತು ಇನ್ನೊಬ್ಬರಿಗೆ ಡೊನಾಲ್ಡ್ ಗ್ರ್ಯಾಂಟ್ ಚಾಕುವಿನಿಂದ ಇರಿದು ಕೊಂದಿದ್ದ.

2005 ರಲ್ಲಿ ಗ್ರಾಂಟ್ ಗೆ ಮರಣದಂಡನೆ ವಿಧಿಸಲಾಯಿತು. ಅಂದಿನಿಂದ ತಮ್ಮ ಶಿಕ್ಷೆಯನ್ನು ರದ್ದುಗೊಳಿಸುವಂತೆ ಹಲವಾರು ಮನವಿಗಳನ್ನು ಸಲ್ಲಿಸಿದ್ದ. ಅಲ್ಲದೆ ತನಗೆ ತಾನು ಬೌದ್ಧಿಕ ನ್ಯೂನತೆಗಳನ್ನು ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. ಓಕ್ಲಹೋಮದಲ್ಲಿ ಮರಣದಂಡನೆಯ ವಿಧಾನದ ಕುರಿತು ಅವರ ಕೊನೆಯ ಮನವಿಯನ್ನು ಯುಎಸ್ ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿತು.

ಇದನ್ನೂ ಓದಿ:ಬ್ರೆಟ್ ಲಿ ಯಾರ್ಕರ್ ಗೆ ಮಣಿದ ಮಹಾರಾಜರು ಕೂಟದಿಂದ ಔಟ್; ನಮನ್-ಪಠಾಣ್ ಹೋರಾಟ ವ್ಯರ್ಥ; ವಿಡಿಯೋ

46 ವರ್ಷ ವಯಸ್ಸಿನ ಗ್ರಾಂಟ್ ಗೆ ಮ್ಯಾಕ್‌ಅಲೆಸ್ಟರ್‌ನಲ್ಲಿರುವ ಒಕ್ಲಹೋಮ ಸ್ಟೇಟ್ ಪೆನಿಟೆನ್ಷಿಯರಿಯಲ್ಲಿ ಮೂರು ಮಾರಕ ಪದಾರ್ಥಗಳ ಚುಚ್ಚುಮದ್ದನ್ನು ನೀಡಿ ಮರಣದಂಡನೆ ನೀಡಲಾಗುತ್ತದೆ.

Advertisement

ಮಾರಣಾಂತಿಕ ಚುಚ್ಚುಮದ್ದು ಅಸಹನೀಯ ನೋವನ್ನು ಉಂಟುಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮರಣದಂಡನೆಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅಮೆರಿಕದ 23 ರಾಜ್ಯಗಳಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next