Advertisement
ಪಶ್ಚಿಮ ಬಂಗಾಳದ ಹೈವೋಲ್ಟೇಜ್ ವಿಧಾನ ಸಭಾ ಕ್ಷೇತ್ರವೆಂದು ಕರೆಸಿಕೊಳ್ಳುವ ನಂದಿಗ್ರಾಮದಲ್ಲಿ ಇಂದು(ಮಾ. 30) ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ಮಾಡುವುದರ ಮೂಲಕ ಮತ ಯಾಚನೆ ಮಾಡಿದರು. ಶಾ ನೇತೃತ್ವದ ರೋಡ್ ಶೋ ನಲ್ಲಿ ಸಹಸ್ರಾರು ಮಂದಿ ಪಕ್ಷದ ಬೆಂಬಲಿಗರು ಪಾಲ್ಗೊಂಡಿದ್ದರು. ಜೈ ಶ್ರೀರಾಮ್, ಅಮಿತ್ ಶಾ ಜಿಂದಾಬಾದ್ ಘೋಷಣೆಗಳು ಮುಗಿಲು ಮುಟ್ಟಿದ್ದವು.
Related Articles
Advertisement
ಇನ್ನು, ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಮಹಿಳಾ ದೌರ್ಜನ್ಯದ ಬಗ್ಗೆಯೂ ಮಾತುಗಳನ್ನಾಡಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ವಾಸವಿದ್ದ ಸ್ಥಳದ 5 ಕಿ.ಮೀ ವ್ಯಾಪ್ತಿಯಲ್ಲಿ ಮಹಿಳೆಯೋರ್ವರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಒಂದು ದುಃಖದ ವಾರ್ತೆ ನನಗೆ ಇಲ್ಲಿ ದೊರಕಿತು. ಮಮತಾ ಬ್ಯಾನರ್ಜಿ ಇದ್ದ ಸ್ಥಳದ ವ್ಯಾಪ್ತಿಯಲ್ಲಿಯೇ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಆಗುತ್ತದೆ ಎಂದಾದಲ್ಲಿ, ರಾಜ್ಯದ ಇತರೆಡೆ ಮಹಿಳೆಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ ..? ಯಾಕೆ ಇದುವರೆಗೆ ಸಂತ್ರಸ್ತ ಮಹಿಳೆಯನ್ನು ಮಮತಾ ಭೇಟಿಯಾಗಿಲ್ಲ..? ಮಮತಾ ಬ್ಯಾನರ್ಜಿ ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ಆದರೇ, ಪಶ್ಚಿಮಬಂಗಾಳದ ಜನರಿಗೆ ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿರುವ ವಿಚಾರದ ಬಗ್ಗೆ ಅರಿವಿದೆ ಎಂದು ಹೇಳಿದ್ದಾರೆ.
ನಂದಿಗ್ರಾಮದ ಜನರ ಉತ್ಸಾಹವನ್ನು ನಾವು ನೋಡುತ್ತಿದ್ದೇವೆ. ಇದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯವರು ನಿಸ್ಸಂಶಯವಾಗಿ ಬಹುಮತದಿಂದ ಗೆಲ್ಲಲಿದ್ದಾರೆ ಎಂಬುವುದನ್ನು ಸೂಚಿಸುತ್ತದೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನು ಚುನಾವಣೆಯಲ್ಲಿ ಸೋಲಿಸುವುದು, ಪರಿವರ್ತನೆಯನ್ನು ತರುವ ಸುಲಭ ಮಾರ್ಗ ಎಂದು ಶಾ ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಕೆಂಪೇಗೌಡ ಈಗ ಹೀರೋ: ‘ಕಟ್ಲೆ’ ಮೂಲಕ ಅದೃಷ್ಟ ಪರೀಕ್ಷೆ