Advertisement

ಸಂಭ್ರಮದ ಸಮಯ

03:33 PM Sep 22, 2017 | |

ಸಭಾಂಗಣ ಫ‌ುಲ್‌ ಆಗಿತ್ತು. ವೇದಿಕೆಯೂ ಕಲರ್‌ ಫ‌ುಲ್‌ ಆಗಿತ್ತು. ಚಿತ್ರರಂಗದ ಅನೇಕ ಹಿರಿಯರು ಬಂದಿದ್ದರು. ಹಾಡು, ಕುಣಿತ ನಡುವೆ ಒಂದೊಂದೇ ಹಾಡುಗಳನ್ನೂ ಹೊರ ತರಲಾಯಿತು. ಇದಕ್ಕೂ ಮುನ್ನ ಮಹರ್ಷಿ ಡಾ.ಆನಂದ ಗುರೂಜಿ ಆ “ಹಾಡು-ಹರಟೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಂದಹಾಗೆ, ಇದು “3 ಗಂಟೆ, 30 ದಿನ 30 ಸೆಕೆಂಡ್‌’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ಆಡಿಯೋ ಸಿಡಿ ರಿಲೀಸ್‌ ಆಗಿದ್ದರಿಂದ ಅಲ್ಲಿ ಡ್ಯಾನ್ಸರ್ಗಳ ಡ್ಯಾನ್ಸ್‌ ಕಾರ್ಯಕ್ರಮವಿತ್ತು. ಹಾಡುಗಳ ಝಲಕ್‌ ತೋರಿಸುವ ಪ್ಲಾನಿಂಗೂ ಮಾಡಲಾಗಿತ್ತು. 

Advertisement

ಇವೆಲ್ಲದರ ನಡುವೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ವೇದಿಕೆಯೇರಿ, “ಅರ್ಧ ಚಂದ್ರ ಮೂಡಿದಂತೆ …’ ಎಂಬ ಹಾಡು ಬಿಡುಗಡೆ ಮಾಡಿದರು. “ಟೈಟಲ್‌ ಬಲು ಉದ್ದವಾಯ್ತು. ಆದ್ರೂ ಮಧ್ಯೆವೊಂದು ಹಂಪು ಇದೆ. ಈಗ ನಿರ್ದೇಶಕರುಗಳು ಏನೆಲ್ಲಾ ಟ್ರಿಕ್‌
ಮಾಡಿದ್ರೂ, ಪ್ರೇಕ್ಷಕರೇ ಜಾತಕ ಬರೆಯೋದು. ಶಿಷ್ಯ ಶ್ರೀಧರ್‌ ಸಂಭ್ರಮ್‌, ಒಳ್ಳೆಯ ಹಾಡು ಕೊಟ್ಟಿದ್ದಾರೆ. ಚಿತ್ರ 300 ದಿನ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು’ ಹಂಸಲೇಖ.

ಇದಕ್ಕೂ ಮುನ್ನ ನಿರ್ಮಾಪಕ ಚಂದ್ರಶೇಖರ್‌ ಆರ್‌. ಪದ್ಮಶಾಲಿ, “20 ವರ್ಷದ ಹಿಂದೆ “ಸಾಗರ ಪರ್ವತ’ ಎಂಬ ಧಾರಾವಾಹಿ ನಿರ್ಮಾಣ ಮಾಡಿದ್ದೆ. ಆಗ ಮಧುಸೂದನ್‌ ಅವರನ್ನು ನಿರ್ದೇಶಕರನ್ನಾಗಿ ಪರಿಚಯಿಸಿದ್ದೆ. ಈಗ ಎರಡು ದಶಕ ಬಳಿಕ ಈ ಚಿತ್ರ ನಿರ್ಮಿಸಿದ್ದೇನೆ. ಇಲ್ಲೂ ಮಧುಸೂದನ್‌ ಅವರೇ ನಿರ್ದೇಶಕರಾಗಿದ್ದಾರೆ. ನನ್ನೊಂದಿಗೆ 12 ಜನ ಸಹ ನಿರ್ಮಾಪಕರೂ ಸಾಥ್‌
ನೀಡಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ ಖುಷಿ ನನಗಿದೆ’ ಅಂದರು ಪದ್ಮಶಾಲಿ.

ಮಧುಸೂದನ್‌ ಅವರು ಈ ಶೀರ್ಷಿಕೆ ಇಟ್ಟಿರುವ ಉದ್ದೇಶದ ಬಗ್ಗೆ ಮಾತನಾಡಿದರು. ಒಂದು ಗೊಂದಲ ಇರಲಿ ಅಂತಾನೇ ಈ ಟೈಟಲ್‌ ಇಟ್ಟಿದ್ದಾಗಿ ಹೇಳಿಕೊಂಡರು. “ಒಂದು ವರ್ಷ ಕಥೆ ಸಿದ್ಧಪಡಿಸಿಕೊಂಡು ಆ ಬಳಿಕ, ಒಂದು ಟೀಮ್‌ ಕಟ್ಟಿಕೊಂಡು ಸಿನಿಮಾ ಮಾಡಿದ್ದೇನೆ. ಹೃದಯ ಮತ್ತು ಬ್ರೈನ್‌ ನಡುವಿನ ಚಿತ್ರವಿದು ಅಂತ ತಮ್ಮ ಚಿತ್ರದ ಕಥೆ, ತಂಡ ಹಾಗೂ ಶ್ರಮ ಹಾಕಿದ’ ಬಗ್ಗೆ ವಿವರಿಸಿದರು ಮಧುಸೂದನ್‌.

ಕಾರ್ಯಕ್ರಮದ ನಡುವೆ, ಪ್ರೋಮೋ ಮತ್ತು ಹಾಡು ತೋರಿಸುವುದರ ಜತೆಗೆ ರಮೇಶ್‌ ಅರವಿಂದ್‌ ಹಾಗೂ ಜಯಂತ್‌ ಕಾಯ್ಕಿಣಿ ಕೂಡ ಸಿನಿಮಾ ಹಾಡುಗಳ ಬಗ್ಗೆ ಮಾತನಾಡಿದ ವೀಡಿಯೋ ಬಂತು. ಅಂದು ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರಪ್ರಸಾದ್‌, ಭಗವಾನ್‌, ಭಾರ್ಗವ, ಜೋಸೈಮನ್‌, ಸುನೀಲ್‌ ಕುಮಾರ್‌ ದೇಸಾಯಿ, ಉಮೇಶ್‌ ಬಣಕಾರ್‌, “ಸೂರಪ್ಪ’ ಬಾಬು, ಬಿಟಿವಿ ಮುಖ್ಯಸ್ಥ ಕುಮಾರ್‌, ನಾಯಕ ಅರುಣ್‌ ಗೌಡ, ನಾಯಕಿ ಕಾವ್ಯಾ ಶೆಟ್ಟಿ ಇತರರು ಇದ್ದರು. ಇವರ ಮಾತುಗಳ ನಡುವೆ, ಶ್ರೀಧರ್‌ ಸಂಭ್ರಮ್‌
ಹಾಗೂ ಚಂದನ್‌ ಶೆಟ್ಟಿ ಹಾಡೊಂದನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಚಿತ್ರದಲ್ಲಿ ಆರು ಹಾಡುಗಳಿದ್ದು,
ಇದೇ ಮೊದಲ ಬಾರಿಗೆ ಶ್ರೀಧರ್‌ ಸಂಭ್ರಮ್‌ ಅವರು ಒಂದು ಹಾಡನ್ನು ಪೂರ್ಣಪ್ರಮಾಣವಾಗಿ ಹಾಡಿದ್ದಾರೆ. ಆ ಹಾಡು 
ದಾಸವಾಣಿಯೊಂದನ್ನು ನೆನಪಿಸುವಂತಿದ್ದು, ಅದರಲ್ಲಿ ಜೀವನ ತತ್ವದ ಸಾರಾಂಶಗಳಿವೆ ಎಂಬುದು ಚಿತ್ರತಂಡದ ಮಾತು.

Advertisement

 ವಿಭ

Advertisement

Udayavani is now on Telegram. Click here to join our channel and stay updated with the latest news.

Next