Advertisement

ಸಂಭ್ರಮ-ವಿಶಿಷ್ಟತೆಯ ಹೋಳಿ

04:54 PM Mar 10, 2020 | Suhan S |

ಅಂಕೋಲಾ: ಹೋಳಿ ಹಬ್ಬದ ಅಂಗವಾಗಿ ಬ್ರಿಟಿಷ ಆಡಳಿತದಿಂದಲೂ ನಡೆದು ಬಂದ ತಾಲೂಕಿನ ವಿಶೇಷ ಆಕರ್ಷಣೆಯಾದ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಮತ್ತು ವಿವಿಧ ಬಗೆಯ ರೂಪಕಗಳು ನಗರದಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಸೇರಿದ ಸಾವಿರಾರು ಜನರಿಗೆ ಮನರಂಜನೆ ನೀಡಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಮೇಘರಾಜ ನಾಯ್ಕರಿಂದ ತಾಮ್ರ ಪತ್ರ ಪಡೆಯುವ ಮೂಲಕ ಸೋಮವಾರ ಸಂಪನ್ನಗೊಂಡಿತು.

Advertisement

ಪ್ರಮುಖವಾಗಿ ಬೆಳಂಬಾರ ಹಾಲಕ್ಕಿ ಸಮುದಾಯದವರು ಹೋಳಿ ಪ್ರಯುಕ್ತ ನಗರದಲ್ಲಿ ವೇಷ ಭೂಷಣಗಳನ್ನು ಹಾಕಿಕೊಂಡು ಪ್ರತಿನಿತ್ಯ ಸಮಾಜದಲ್ಲಿ ಆಗುಹೊಗುಗಳ ಅಣಕು ಪ್ರದರ್ಶನ ಮಾಡುತ್ತಾರೆ. ಈ ಒಂದು ದಿನ ಮಾತ್ರ ಅವರಿಗೆ ಯಾರ ಕುರಿತು ಅಣಕು ಮಾಡಿದರೂ ಮಾತ್ರ ಯಾವುದೇ ನಿರ್ಬಂಧ ಇರುವುದಿಲ್ಲ. ಸಮಾಜದ ಅನೇಕ ಘಟನೆಗಳನ್ನು ಇವರು ತಮ್ಮ ಅಣಕು ಪ್ರದರ್ಶನದಲ್ಲಿ ಮಾಡತ್ತಾರೆ. ಅಲ್ಲದೆ ವಿವಿಧ ಬಗೆಯ ರೂಪಕವನ್ನು ಮಾಡಿ ಪಟ್ಟಣದಲ್ಲಿ ಸೇರಿದ ಸಾವಿರಾರು ಜನರನ್ನು ರಂಜಿಸುತ್ತಾರೆ. ಇದರ ಜೊತೆಯಲ್ಲಿ ಮರಗಾಲು ವೇಷ, ನಾಡಿನ ಸುಪ್ರಸಿದ್ಧ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತವಂತು ಆಕರ್ಷಣೀಯವಾಗಿ ಮೂಡಿಬಂದಿದೆ.

ಈ ಸಂದರ್ಭದಲ್ಲಿ ಬೆಳಂಬಾರ ಸುಗ್ಗಿ ತಂಡಕ್ಕೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರ ಪತ್ರವನ್ನು ತಹಶೀಲ್ದಾರ್‌ ಊರಗೌಡರ ಸಮ್ಮುಖದಲ್ಲಿ ತೆರೆದು ಗೌರವ ಸೂಚಿಸಿದರು.

ವಿಶೇಷ ಆಕರ್ಷಣೆ: ಈ ವರ್ಷದ ಅಣಕು ಪ್ರದರ್ಶನದಲ್ಲಿ ನೆರೆ ಹಾವಳಿಯಲ್ಲಿ ನೀರಿನಲ್ಲಿ ಸಿಲುಕಿದ ವೃದ್ಧೆಯನ್ನು ರಕ್ಷಿಸಿದ ಸೈನಿಕರ ತಂಡ, ನೆರೆ ಹಾವಳಿಯಲ್ಲಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದ ಸಂತ್ರಸ್ತರು, ಅಮರ ಪ್ರೇಮಿ, ರಾಮ ಸೇತುವೆ ನಿರ್ಮಾಣಕ್ಕೆ ಕಲ್ಲುಗಳನ್ನು ಹೊತ್ತು ತಂದ ವಾನರ ಸೈನ್ಯ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ ಅಣಕು, ಕೊರೊನಾ ವೈರಸ್‌ದಿಂದ ಬರುವ ರೋಗ ತಡೆಯಲು ಬಂದ ವೈದ್ಯರ ತಂಡ, ವಿಶೇಷವಾದ ಅವತಾರ್‌ ಕಿಂಗ್‌ ಬರ್ಡ್‌, ಭಾರತದಲ್ಲಿ ಟ್ರಂಪ್‌ಗೆ ಭರ್ಜರಿ ಸ್ವಾಗತ, ನೆರೆ ಸಂತ್ರಸ್ತರಿಗೆ ಹೆಲಿಕಾಪ್ಟರ್‌ ನಲ್ಲಿ ಆಹಾರವನ್ನು ನೀಡುತ್ತಿರುವುದು, ಚೆನ್ನಮ್ಮನ ಕೊಟೆಗೆ ನುಗ್ಗಿದ ಬ್ರಿಟಿಷರು, ಕುರುಕ್ಷೇತ್ರ ರಥ, ತಾಲೂಕಿನ ಪದ್ಮಶ್ರೀ ಪ್ರಶಸ್ತಿ ಪಡೆದ ಹಾಲಕ್ಕಿ ಸಮುದಾಯದ ಮಹಿಳೆಯರು, ತಾಲೂಕಿನ ವಿಶೇಷ ಆಕರ್ಷಣೆಯಾದ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಜೊತೆಗೆ ಭಾರಿ ಗಾತ್ರದ ಕರಡಿ ವೇಶ ಅನೇಕ ರೂಪಕಗಳು ಕಂಡುಬಂದವು.

 

Advertisement

-ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next