Advertisement
ಶುಭ ಸಂಕೇತದ ಗಂಟೆ, ನಕ್ಷತ್ರಗಳ ಮಿಂಚು, ಬಲೂನ್‌ಗಳ ಚಿತ್ತಾರಗಳಿಂದ ಎಲ್ಲಾ ಚರ್ಚ್‌ಗಳು ಝಗಮಗಿಸುತ್ತಿದ್ದವು. ಇನ್ನು ಕ್ರೈಸ್ತ ಬಾಂಧವರು ಬಡವರಿಗೆ ಬಟ್ಟೆ, ಹಣ ಇತ್ಯಾದಿ ದಾನ ಮಾಡಿ, ಸ್ನೇಹಿತರೊಂದಿಗೆ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ತಮ್ಮ ಮನೆಗಳಲ್ಲಿ ಸಿಹಿ ತಿಂಡಿಗಳು, ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಸವಿದು ಕ್ರಿಸ್‌ಮಸ್ ಆಚರಿಸಿದರು.
Related Articles
Advertisement
ಚರ್ಚ್‌ನ ಆವರಣದಲ್ಲಿ ಸಾಂತಾಕ್ಲಾಸ್ ಮಕ್ಕಳಿಗೆ ಚಾಕೋಲೆಟ್, ಕೇಕ್ ವಿತರಿಸಿದನು. ಚರ್ಚ್ ಸುತ್ತಮುತ್ತಲ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಜೋರಿತ್ತು. ಬ್ರಿಗೇಡ್ ರಸ್ತೆ ಪೂರ್ತಿ ವಿದ್ಯುತ್‌ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಕ್ರಿಸ್‌ಮಸ್ ಅಂಗವಾಗಿ ನಗರದ ಬಹುತೇಕ ಮಾಲ್‌ಗಳು ವಿಶೇಷ ಅಲಂಕಾರಗೊಂಡು ಗ್ರಾಹಕರನ್ನು ಆಕರ್ಷಿಸುತ್ತಿದ್ದವು.
ಚರ್ಚ್‌ಗಳಲ್ಲಿ ವಿಶೇಷ ಪೂಜೆ: ಶಿವಾ ಜಿ ನ ಗ ರ ದ ಸೇಂಟ್ ಮೇರಿಸ್ ಬೆಸಿ ಲಿಕಾ ಚರ್ಚ್‌ನಲ್ಲಿ ಪ್ರಧಾನ ಫಾದರ್ ಜಾನ್ ರೋಜ್ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಜರುಗಿದವು. ಇವುಗಳ ಜತೆಗೆ ಬ್ರಿಗೇಡ್ ರಸ್ತೆ ಯ ಲ್ಲಿ ರುವ ಸಂತ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆ ಡ್ರಲ್, ಚಾಮ ರಾ ಜ ಪೇ ಟೆಯ ಸೇಂಟ್ ಜೋಸೆಫ್ ಚರ್ಚ್, ಎಂಜಿ ರಸ್ತೆಯ ಈಸ್ಟ್ ಪೆರೇಡ್ ಚರ್ಚ್, ರಿಚ್‌ಮಂಡ್ ರಸ್ತೆಯಲ್ಲಿರುವ ಸೇಕ್ರೇಡ್ ಹಾರ್ಟ್ ಚರ್ಚ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಸಂಪಂಗಿ ರಾಮನಗರದ ಹಡ್ಸನ್ ಸ್ಮಾರಕ ಚರ್ಚ್ ಸೇರಿ ದಂತೆ ನಗ ರದ ಹಲವು ಕ್ಯಾಥೊ ಲಿಕ್ ಮತ್ತು ಪ್ರೊ ಟೆ ಸ್ಟೆಂಟ್ ಚರ್ಚ್ ಗ ಳಲ್ಲಿ (ಸಿಎ ಸ್‌ಐ) ವಿಶೇಷ ಪ್ರಾರ್ಥನೆ ಜರುಗಿದವು.