Advertisement

ದುಬೈಯಲ್ಲಿ ಸಿಗರೇಟ್‌ ಮೇಲೆ ದುಬಾರಿ ಸುಂಕ

10:05 AM Dec 03, 2019 | Team Udayavani |

ದುಬೈ: ದುಬೈನಲ್ಲಿ ಹೊಸ ಅಬಕಾರಿ ಸುಂಕ ರವಿವಾರ ಜಾರಿಗೆ ಬಂದಿದೆ. ಪರಿಣಾಮವಾಗಿ ಅಂಗಡಿಗಳಲ್ಲಿ ಸಿಗರೇಟ್‌ ಮತ್ತು ಕೆಲವು ಪಾನೀಯ ಮಾರಾಟದಲ್ಲಿ ಇಳಿಮುಖವಾಗಿದೆ.

Advertisement

ಸಿಗರೇಟ್‌, ತಂಬಾಕು ಉತ್ಪನ್ನಗಳು, ಎಲೆಕ್ಟ್ರಾನಿಕ್‌ ಧೂಮಪಾನ ಸಾಧನಗಳು ಮತ್ತು ಎನರ್ಜಿ ಪಾನೀಯಗಳ ಬೆಲೆ ಶೇಕಡಾ 100ರಷ್ಟು ಹೆಚ್ಚಿಸಲಾಗಿದೆ, ಸಿಹಿಗೊಳಿಸಿದ ಮತ್ತು ಕಾಬೊìನೇಟೆಡ್‌ ಪಾನೀಯಗಳ ದರವನ್ನು ಶೇಕಡಾ 50ರಷ್ಟು ಏರಿಕೆಮಾಡಲಾಗಿದೆ.

ಪ್ರತಿ ಸಿಗರೆಟ್‌ಗೆ ಈಗ ಕನಿಷ್ಠ 40 ಫಿಲ್ಸ್‌ಗಳಷ್ಟು ಹೆಚ್ಚುವರಿ ಪಾವತಿಸಬೇಕಾಗಿದೆ. ಅಂದರೆ ಸಾಮಾನ್ಯ ಸಿಗರೆಟ್‌ನ 20 ಪ್ಯಾಕ್‌ಗಳು ಕನಿಷ್ಠ 156.01 ರೂ. (ಈಜ8) ರಷ್ಟು ಹೆಚ್ಚು ವೆಚ್ಚವಾಗಲಿದೆ. ಒಂದು 39 ರೂ.ನ (ಈಜ2) ಸಕ್ಕರೆ ಪಾನೀಯವು ಈಗ 58.50 ರೂ. (ಈಜ3) ದುಬಾರಿಯಾಗಿದೆ.

ಸಿಗರೇಟ್‌ ಮತ್ತು ತಂಪು ಪಾನೀಯಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮಧುಮೇಹವನ್ನು ಹೆಚ್ಚಿಸುತ್ತವೆ. ನಮಗೆ ಆರೋಗ್ಯಕರ ದೇಶ ಬೇಕು. ಯಾವುದೇ ಸಂದರ್ಭದಲ್ಲಿ ಇಂತಹ ವಿಷಯಗಳಿಂದ ನಮ್ಮ ಸಮಾಜ ಕೆಡಬಾರದು. ಈ ಹಿನ್ನೆಲೆಯಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಪಾಲಿಸಲು 48ನೇ ರಾಷ್ಟ್ರೀಯ ದಿನದಂದೇ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next