Advertisement

ಬೆಳಗಾವಿ ಜಿಲ್ಲೆಯಲ್ಲಿ 794 ಕಡೆ ಅಬಕಾರಿ ದಾಳಿ: 1.10 ಕೋಟಿ ಮೌಲ್ಯದ ವಸ್ತು ಜಪ್ತಿ

04:02 PM Apr 27, 2020 | keerthan |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧವಾಗಿರುವ ಕಾರಣ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆಯು ಮಾಚ್ 24ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳ ಮೇಲೆ ನಿರಂತರವಾಗಿ ದಾಳಿ, ಹಗಲು- ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿದೆ.

Advertisement

ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 794 ದಾಳಿಗಳನ್ನು ನಡೆಸಿ, 108 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 64 ಆರೋಪಿಗಳನ್ನು ಬಂಧಿಸಿ 4662.695 ಲೀಟರ್ ಮದ್ಯ, 95.900 ಲೀಟರ್ ಗೋವಾ ಮದ್ಯ, 10.170 ಲೀಟರ್ ಮಹಾರಾಷ್ಟ್ರ ಮದ್ಯ, 1207.200 ಲೀಟರ್ ಬಿಯರ್, 53 ಲೀಟರ್‌ ಸೇಂಧಿ, 170 ಲೀಟರ್ ಬೆಲ್ಲದ ಕೊಳೆ, 79.610 ಲೀಟರ್ ಸಂತ್ರಾ, 93 ಲೀಟರ್ ಕಾಜು, 17,14,400 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು, 50ಕೆ.ಜಿ ಬೆಲ್ಲ ಹಾಗೂ 7.400 ವೈನ್ ವಶಪಡಿಸಿ ಕೊಳ್ಳಲಾಗಿದೆ.

79 ದ್ವಿಚಕ್ರ ವಾಹನ, 02 ಆಟೋ ರಿಕ್ಷಾ, 2 ಕಾರ್, 04 ಗೂಡ್ಸ್ ವಾಹನ, 1 ಮಹೇಂದ್ರ ಪಿಕಪ್ (ಒಟ್ಟು 88 ವಾಹನಗಳ ಅಂದಾಜು ಮೌಲ್ಯ 52 ಲಕ್ಷ ) ಮತ್ತು ಮದ್ಯ, ಬಿಯರ್ ಹಾಗೂ ಇತರೆ ಅಂದಾಜು ಮೌಲ್ಯ ರೂ. 58 ಲಕ್ಷಗಳು ಆಗುತ್ತದೆ. ಹೀಗೆ ಒಟ್ಟು ರೂ. 1 ಕೋಟಿ 10 ಲಕ್ಷ ಮೌಲ್ಯದ ಮದ್ಯ ಮತ್ತು ಅಕ್ರಮ ಸಾಗಾಣಿಕೆಗೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next