Advertisement

ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯಮಗ್ನನಾಗಿದ್ದೇನೆ: ಅಬಕಾರಿ ಸಚಿವ ಕೆ. ಗೋಪಾಲಯ್ಯ

10:18 AM Apr 27, 2023 | Team Udayavani |

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಬಡಾವಣೆ ಕಂಠೀರವ ನಗರ ಹಾಗೂ ಪರಿಮಳ ನಗರದಲ್ಲಿ  ಮನೆ ಮನೆಗೆ ಭೇಟಿ ನೀಡಿ ತಮ್ಮೆಲ್ಲರ ಬೇಡಿಕೆಗಳನ್ನು ಅರಿತು ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯಮಗ್ನನಾಗಿದ್ದೇನೆ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯರವರು ಮತಯಾಚನೆ ನಡೆಸಿದರು.

Advertisement

ಕುಡಿಯುವ  ನೀರಿನ ಘಟಕ, ನವ ನಂದಿನಿ ಪಾರ್ಕ್, ಆರೋಗ್ಯದ ಕಾಳಜಿಯಿಂದ ಉತ್ತಮ ಆಸ್ಪತ್ರೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ನಿರ್ಮಾಣ ಹಾಗೂ ಕೋವಿಡ್ ಅವಧಿಯಲ್ಲಿ  350 ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟು ಮಾನ್ಯ ಸಚಿವರು ಮತಯಾಚನೆಯನ್ನು ಮಾಡಿದರು.

ಸರ್ಕಾರಿ ಶಾಲೆ. ಸುಮಾರು ಒಂದುವರೆ ಸಾವಿರ ಮಕ್ಕಳು ಪ್ರವೇಶವನ್ನು ಪಡೆದುಕೊಳ್ಳುತ್ತಿದ್ದಾರೆ.  ಉಚಿತವಾಗಿ ಶಿಕ್ಷಣವನ್ನು ಕೊಡಲು ಮುಖಂಡರುಗಳು ಕ್ರಮ ವಹಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್,  ಮಾನ್ಯಳ್  ನಾಗರಾಜು, ಪ್ರಸನ್ನ ಕುಮಾರ, ಪ್ರಸನ್ನ, ಹನುಮಂತು, ಹನುಮಂತರಾಯಪ್ಪ, ಮರಿಯಣ್ಣ, ಸುರಭಿ ನಾಗರಾಜು, ಅಂಬರೀಶ್, ಪುಟ್ಟಸ್ವಾಮಿ, ನಾರಾಯಣಸ್ವಾಮಿ  ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next