Advertisement
ಡಿ.27-3.57 ಲಕ್ಷ ಲೀಟರ್-(2.41 ಲಕ್ಷ ಬಿಯರ್), ಡಿ.28-2.31 ಲಕ್ಷ ಲೀಟರ್ ಮದ್ಯ-(1.67 ಲಕ್ಷ ಬಿಯರ್), ಡಿ.29-2.31 ಲಕ್ಷ ಲೀಟರ್ ಮದ್ಯ,-(1.93 ಲಕ್ಷ ಬಿಯರ್), ಡಿ.30-2.93 ಲಕ್ಷ ಲೀಟರ್, (2.59 ಲಕ್ಷ ಬಿಯರ್), ಡಿ.31 3 ಲಕ್ಷ ಲೀಟರ್-(2.41 ಲಕ್ಷ ಬಿಯರ್), ಡಿ.31-181 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಹೇಳಲಾಗಿದೆ.
Related Articles
Advertisement
21,981 ಕೋಟಿ ರೂ.ಆದಾಯ:ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ.ರಾಜಸ್ವ ಗುರಿ ನೀಡಿತ್ತು. ಈ ವರ್ಷದ ಡಿ.29ರವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಇಲಾಖೆಗೆ ಬರೋಬ್ಬರಿ 21,981 ಕೋಟಿ ರೂ.ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಶೇ.14 ಮದ್ಯ ಮಾರಾಟದಲ್ಲಿ ಹೆಚ್ಚಳವಾಗಿದೆ ಅಬಕಾರಿ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ. 2020-21ರ ಡಿ.23ರಿಂದ ಡಿ.31ರವರೆಗೆ 17.48 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್ ), 10.62 ಲಕ್ಷ ಬಾಕ್ಸ್ ಬಿಯರ್, 2021-22ರ ಡಿ.23ರಿಂದ ಡಿ.31ರವರೆಗೆ 19.46 ಲಕ್ಷ ಬಾಕ್ಸ್ ಐಎಂಎಲ್ , 11.24 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ರಾಜ್ಯದಲ್ಲಿ 3,921 ವೈನ್‌ಶಾಪ್(ಸಿಎಲ್ 2), 3,622 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್ 9), 1,729 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್ 7 ) ಹಾಗೂ 265 ಕ್ಲಬ್ ಸೇರಿ ಒಟ್ಟು 12,113 ಮದ್ಯದಂಗಡಿಗಳಿವೆ. 2022-23ರ ಡಿ.29ರಿಂದ ಡಿ.31ರವರೆಗೆ 8.24 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 6.62 ಲಕ್ಷ ಬಾಕ್ಸ್ ಬಿಯರ್ ಸೇಲಾಗಿದೆ. ಇದೂ ಸಹ ಹಿಂದಿನ ಎರಡು ವರ್ಷದ ದಾಖಲೆಗಳನ್ನು ಮುರಿದಿದೆ. ಡಿ.31ರಂದು 200 ಕೋಟಿ ರೂ.ಮೌಲ್ಯದ ಐಎಂಎಲ್ ಮತ್ತು ಬಿಯರ್ ಮಾರಾಟವಾಗಿದೆ. ಸಿಲಿಕಾನ್ ಸಿಟಿಯಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಹೊಸ ವರ್ಷ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಸಾಂದರ್ಭಿಕ ( ಒಂದು ದಿನಕ್ಕೆ ಸೀಮಿತ) ಪರವಾನಗಿ ನೀಡಲಾಗಿದೆ. ಈ ವರ್ಷ ಪರವಾನಗಿಗಾಗಿ ಸಾವಿರಾರು ಅರ್ಜಿಗಳು ಅಬಕಾರಿ ಇಲಾಖೆಗೆ ಸಲ್ಲಿಕೆಯಾಗಿದ್ದವು.