Advertisement

ಕೊವಿಡ್ 19 ಕರ್ಪ್ಯೂ ಇದ್ದರೂ ಮದ್ಯ ಮಾರಾಟ: ಅಬಕಾರಿ ಅಧಿಕಾರಿಗಳಿಂದ ಸ್ಟಾಕ್ ವೀಕ್ಷಣೆ

09:08 AM Apr 14, 2020 | Hari Prasad |

ಗಂಗಾವತಿ: ಕೋವಿಡ್ ವೈರಸ್ ಹರಡದಂತೆ ಕರ್ಪ್ಯೂ ವಿಧಿಸಿದರೂ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮದ್ಯವನ್ನು ಅಕ್ರಮವಾಗಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಜನತೆ ಮತ್ತು ಸಂಘ ಸಂಸ್ಥೆಗಳಿಂದ ಆಕ್ರೋಶ ವ್ಯಕ್ತವಾಗಿದ್ದರಿಂದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕರ್ಪ್ಯೂ ವಿಧಿಸಿದ ದಿನದಿಂದ ಇಲ್ಲಿಯವರೆಗೆ ಇರುವ ಸ್ಟಾಕ್ ಚೆಕ್ ಮಾಡಲಾಯಿತು. ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಅಬಕಾರಿ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Advertisement

ನಾಮಕಾವಸ್ತೆ ತಪಾಸಣೆ: ಕೋವಿಡ್ ಕರ್ಪ್ಯೂ ಇದ್ದರೂ ಮದ್ಯವನ್ನು ಅಕ್ರಮವಾಗಿ ದುಪ್ಪಟ್ಟು ದರಕ್ಕೆ ಮಾರಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಇಂತಹ ಅಕ್ರಮ ತಡೆಯಲು ಈಗಾಗಲೇ ಒಂಭತ್ತು ಬಾರ್ ಗಳ ಲೈಸೆನ್ಸ್ ರದ್ದು ಮಾಡಿದ್ದು ಗಂಗಾವತಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಲಿಕ್ಕರ್ ಲಾಬಿಗೆ ಒಳಗಾಗಿ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್ ಕೊಡುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಅಕ್ರಮವೆಸಗಿದವರ ಲೈಸೆನ್ಸ್ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತಿಪ್ಪಣ್ಣ ಆರತಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next