ಕಾರವಾರ: ಜಿಲ್ಲಾ ಕೇಂದ್ರದ ಅಬಕಾರಿ ಅಧಿಕಾರಿಗಳು ಖಚಿತ ಸುಳಿವಿನ ಮೇರೆಗೆ ಕಾರವಾರ ರೈಲ್ವೆ ನಿಲ್ದಾಣದ ಸಮೀಪದ ಶಿರವಾಡ ಪ್ರದೇಶದಲ್ಲಿ ದಾಳಿ ಮಾಡಿ ಅಕ್ರಮವಾಗಿ ದಾಸ್ತನು ಇಟ್ಟಿದ್ದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಒಂದು ವಾಹನ ಗೋವಾ, ಮತ್ತೂಂದು ವಾಹನ ಕರ್ನಾಟಕದ ನೋಂದಣಿ ಸಂಖ್ಯೆ ಹೊಂದಿವೆ. ಶಿರವಾಡದ ದೀಪಕ್ ಮಹಾನಂದ ನಾಯ್ಕ, ಹೊನ್ನಾವರದ ಸುರೇಶ್ ರಾಮಾ ಪಟಗಾರ ಎಂಬುವವರು ತಲೆ ಮರೆಸಿಕೊಂಡಿದ್ದು, ಈ ಪ್ರಕರಣದಲ್ಲಿ ಅವರ ಶಾಮೀಲಾತಿ ಇದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ತಿಳಿಸಿದ್ದಾರೆ. ಇವರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದು, 9 ಲಕ್ಷ ರೂ. ಮೊತ್ತದ ಎರಡು ವಾಹನ, 2 ಲಕ್ಷಕ್ಕೂ ಹೆಚ್ಚಿನ ಮೊತ್ತದ ಮದ್ಯ ಸೇರಿ ಒಟ್ಟು 11,16,900 ಮೊತ್ತದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
Advertisement
ಗೋದಾಮು ಒಂದರಲ್ಲಿ ಮದ್ಯವನ್ನು ಸಂಗ್ರಹಿಸಿ ಇಡಲಾಗಿತ್ತು. 833.10 ಲೀಟರ್ ಗೋವಾ ಮದ್ಯ ಅಬಕಾರಿ ಅಧಿಕಾರಿಗಳ ವಶವಾಗಿದೆ. ಮೂಟೆಗಳಲ್ಲಿ ಮದ್ಯವನ್ನು ಶೇಖರಿಸಿ ಇಡಲಾಗಿತ್ತು. ಗೋವಾ ಪೆನ್ನಿ, ರಮ್, ವಿಸ್ಕಿ ತುಂಬಿದ ಬಾಟಲಿಗಳು ಚೀಲಗಳಲ್ಲಿ ಇದ್ದವು. ಟಾಟಾ ಗೂಡ್ಸ್ ಎರಡು ವಾಹನಗಳಲ್ಲಿ ಮದ್ಯ ಸಾಗಿಸಲು ಸಂಚು ರೂಪಿಸಲಾಗಿತ್ತು. ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.