Advertisement
ಪಂಚಾಯತ್ ಅಧ್ಯಕ್ಷ ಅಚ್ಯುತ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹಿಂದೆ ಗುತ್ತಿಗಾರು ಪೇಟೆ ಯಲ್ಲಿದ್ದ ಎರಡು ಮದ್ಯದಂಗಡಿಗಳನ್ನು ಈಗ ಶಾಲಾ ಕಾಲೇಜು ಬಳಿ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಆರ್. ಲೊಕೇಶ್ ಮತ್ತು ಜನಜಾಗೃತಿ ಸಮಿತಿ ಅಧ್ಯಕ್ಷ ಲೋಕೇಶ್ ಪೀರನಮನೆ ವಿಷಯ ಪ್ರಸ್ತಾಪಿಸಿ ಮಾಹಿತಿ ಬಯಸಿದರು.
Related Articles
ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸಭೆಯಲ್ಲಿ ಜಿಪಂ ಇಂಜಿನಿಯರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಕಳೆದ ಕೆಲವು ಕಾಲಗಳಿಂದ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದರೂ ಏಕೆ ತೇಪೆ ಹಾಕುವ ಕಾರ್ಯ ಮಾಡಿಲ್ಲ? ಈಗ ವಾಹನ ಓಡಾಟಕ್ಕೆ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಉತ್ತರಿಸಿದ ಇಂಜಿನಿಯರ್, ಈ ರಸ್ತೆಗೆ 5 ಲಕ್ಷ ರೂಪಾಯಿ ಅನುದಾನ ಶಾಸಕರು ಇರಿಸಿದ್ದು, ಮಳೆಗಾಲದ ನಂತರ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
Advertisement
ಗೈರಾದ ಅಧಿಕಾರಿಗಳಿಗೆ ನೊಟೀಸ್ಗ್ರಾಮಸಭೆಗೆ ಗೈರಾದ ಅಧಿಕಾರಿಗಳ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ನೊಡೆಲ್ ಅಧಿಕಾರಿ ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ ಎಂದರು. ಗ್ರಾಮೀಣ ಭಾಗದಲ್ಲಿ ರಸ್ತೆ ದುರಸ್ತಿಗೆ ಅರಣ್ಯ ಇಲಾಖೆ ಸಹಕಾರ ಬೇಕು ಎಂದು ಸದಸ್ಯರು ಆಗ್ರಹಿಸಿದರು. 94 ಸಿ ಗೊಂದಲ ನಿವಾರಣೆ, ಪೈಕ ಶಾಲೆಯ ಶಿಕ್ಷಕರ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಆಗ್ರಹಿಸಿದರು. ಗುತ್ತಿಗಾರಿನಲ್ಲಿ ರುದ್ರಭೂಮಿ ಅವಶ್ಯವಾಗಿದೆ. ಭೂಮಿ ಒತ್ತುವರಿ ತೆರವಾಗಬೇಕು. ಕೃಷಿ ಯಂತ್ರ ಧಾರೆ, ಗುತ್ತಿಗಾರಿಗೂ ಬರಲು ಸಭೆಯಲ್ಲಿ ಒತ್ತಾಯ ಕೇಳಿಬಂದಿತು. ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ ಮಾತನಾಡಿ, ಗ್ರಾಮದ ಅಭಿವೃದ್ಧಿಗಾಗಿ ಧನಾತ್ಮಕ ರೀತಿಯ ಚರ್ಚೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆ ಯಲ್ಲಿ ಉತ್ತಮ ಚರ್ಚೆ ನಡೆದಿದೆ ಎಂದರು. ಕೃಷಿ ಇಲಾಖಾಧಿಕಾರಿ ಫಾಲಚಂದ್ರ ನೊಡೆಲ್ ಅಧಿಕಾರಿ ಯಾಗಿದ್ದರು. ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ ಉಪಸ್ಥಿತರಿದ್ದರು. ಗ್ರಾ.ಪಂ. ಪಿ.ಡಿ.ಒ. ಶ್ಯಾಮ ಪ್ರಸಾದ್ ಸ್ವಾಗತಿಸಿ, ವಂದಿಸಿದರು. ಕನ್ನಡ ಬಾರದ ಮ್ಯಾನೇಜರ್
ಗುತ್ತಿಗಾರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮೆನೇಜರ್‌ಗೆ ಕನ್ನಡ ಬರುತ್ತಿಲ್ಲ, ಇತರ ಕೆಲವು ಸಿಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮದ ಬಹುಪಾಲು ಮಂದಿಗೆ ವ್ಯವಹಾರ ನಡೆಸಲು ಕಷ್ಟವಾಗಿದೆ ಎಂದು ದೂರಿದರು. ಈ ಬಗ್ಗೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಯಿತು.