Advertisement

ದಾಂತೇವಾಡ: ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲರಿಬ್ಬರ ಹತ್ಯೆ

10:35 AM Dec 18, 2021 | Team Udayavani |

ದಾಂತೇವಾಡ : ನಕ್ಸಲ್ ತೀವ್ರ ಹಾವಳಿಯಿರುವ ಛತ್ತೀಸ್ ಗಢದ ದಾಂತೇವಾಡದಲ್ಲಿ ಶನಿವಾರ ಬೆಳಗಿನ ಜಾವ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮುಂಜಾನೆ 5:30 ರ ಸುಮಾರಿಗೆ ದಾಂತೇವಾಡ ಡಿಆರ್‌ಜಿ ಮತ್ತು ಮಾವೋವಾದಿಗಳ ನಡುವೆ ಗೊಂಡರಾಸ್ ಕಾಡಿನ ಬಳಿ (ಪಿಎಸ್ ಅರನ್‌ಪುರ, ದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ನಂತರ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.

ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನೀರಿಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next