ಪಲ್ಲೆಕೆಲೆ: ಏಷ್ಯಾ ಕಪ್ ಕೂಟದ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಸುಲಭ ಗೆಲುವು ಸಾಧಿಸಿ ಸೂಪರ್ ಫೋರ್ ಹಂತಕ್ಕೆ ಲಗ್ಗೆಯಿಟ್ಟಿದೆ. ನೇಪಾಳ ವಿರುದ್ಧ ನಡೆದ ಪಂದ್ಯದಲ್ಲಿ ಹತ್ತು ವಿಕೆಟ್ ಗಳ ಜಯ ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಅವರು ಮುಂದಿನ ವಿಶ್ವಕಪ್ ಗೆ ತಂಡ ಸಂಯೋಜನೆ ಬಗ್ಗೆ ಮಾತನಾಡಿದ್ದಾರೆ. ಇಂದು (ಸೆ.05) ವಿಶ್ವಕಪ್ ಗೆ ತಂಡ ಆಯ್ಕೆ ಮಾಡಲು ಕೊನೆಯ ದಿನಾಂಕವಾಗಿದ್ದು, ಇಂದು ಮಧ್ಯಾಹ್ನ ಅಜಿತ್ ಅಗರ್ಕರ್ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಲಾಗಿದೆ.
“ನಾವು ಇಲ್ಲಿಗೆ ಬಂದಾಗ, ಬಹುಶಃ ಒಂದು ಅಥವಾ ಎರಡು ಸ್ಥಾನಗಳನ್ನು ಹೊರತುಪಡಿಸಿ ನಮ್ಮ ವಿಶ್ವಕಪ್ ತಂಡ ಹೇಗಿರುತ್ತದೆ ಎಂದು ನಮಗೆ ತಿಳಿದಿತ್ತು. ಈ ಎರಡು ಪಂದ್ಯಗಳಿಂದ ನಾವು ನಿಜವಾಗಿಯೂ ಹೆಚ್ಚು ನೋಡಲು ಸಾಧ್ಯವಿಲ್ಲ. ಅದೃಷ್ಟವಶಾತ್ ನಾವು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಎರಡನೇ ಬೌಲಿಂಗ್ ಮಾಡಿದ್ದೇವೆ. ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. ಆದರೆ ಕೆಲವು ಆಟಗಾರರು ಗಾಯದಿಂದ ಹೊರಬಂದು ತಿಂಗಳುಗಳ ನಂತರ ಆಡುತ್ತಿದ್ದಾರೆ” ಎಂದು ರೋಹಿತ್ ಪಂದ್ಯದ ನಂತರ ಹೇಳಿದರು.
ಇದನ್ನೂ ಓದಿ:Karnataka ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; ಮಂಗಳೂರು ಕಮಿಷನರ್, ಉಡುಪಿ ಎಸ್ ಪಿ ಬದಲಾವಣೆ
ಭಾರತವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಏಷ್ಯಾ ಕಪ್ ನಲ್ಲಿ ಆಡಿದ ತಂಡವೇ ಬಹುತೇಕ ವಿಶ್ವಕಪ್ ಗೆ ಆಯ್ಕೆಯಾಗುವ ಸಾಧ್ಯತೆಯಿದೆ. ವಿಶ್ವಕಪ್ ಗೆ 15 ಜನರ ತಂಡ ಅಂತಿಮಗೊಳಿಸಬೇಕಾದ ಕಾರಣ 17 ಜನರ ಏಷ್ಯಾ ಕಪ್ ಸ್ಕ್ವಾಡ್ ನಿಂದ ಇಬ್ಬರನ್ನು ಕೈಬಿಡಬೇಕಾಗಿದೆ.