Advertisement

Olympics: ಅಸಂಖ್ಯಾತ ಕ್ರೀಡಾಪಟುಗಳಿಗೆ ನೀರಜ್ ಸ್ಫೂರ್ತಿಯಾಗಲಿದ್ದಾರೆ… ಪ್ರಧಾನಿ ಮೋದಿ

09:59 AM Aug 09, 2024 | Team Udayavani |

ನವದೆಹಲಿ: ಪ್ಯಾರಿಸ್: ಸತತ ಎರಡನೇ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದ ಭಾರತದ ಆಟಗಾರ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

Advertisement

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ಅವರು ಒಲಿಂಪಿಕ್ ದಾಖಲೆಯ 92.97 ಮೀಟರ್ ದೂರ ಎಸೆದು ಚಿನ್ನ ಗೆದ್ದರು. ನೀರಜ್ ತಮ್ಮ ಋತುವಿನ ಅತ್ಯುತ್ತಮ 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ನೀರಜ್ ಅವರ ಆರು ಪ್ರಯತ್ನಗಳಲ್ಲಿ ಐದು ಫೌಲ್ ಆಗಿದ್ದವು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಒಲಿದಂತಾಗಿದೆ.

ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡ ಪ್ರಧಾನಿ, ‘ನೀರಜ್ ಚೋಪ್ರಾ ಶ್ರೇಷ್ಠತೆಗೆ ಜೀವಂತ ಉದಾಹರಣೆ. ಅವರು ತಮ್ಮ ಪ್ರತಿಭೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ಅವರು ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಯಶಸ್ವಿಯಾಗಿರುವುದು ಭಾರತಕ್ಕೆ ಸಂತಸ ತಂದಿದೆ. ಬೆಳ್ಳಿ ಪದಕ ಗೆದ್ದಿರುವ ಅವರಿಗೆ ಅಭಿನಂದನೆಗಳು. ಅವರು ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಲು ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

Advertisement

ಮೆಚ್ಚುಗೆ ವ್ಯಕ್ತಪಡಿಸಿದ ನೀತಾ ಅಂಬಾನಿ:
ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಅವರಿಗೆ ದೇಶದ ಗಣ್ಯಾತಿ ಗಣ್ಯರು ಅಭಿನಂದನೆ ಸಲ್ಲಿಸಿದ್ದು ಅದರಲ್ಲಿ IOC ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ ಕೂಡ ಅಭಿನಂದನೆ ಸಲ್ಲಿಸಿದ್ದು, ನೀರಜ್ ಚೋಪ್ರಾ, ಪ್ಯಾರಿಸ್ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ! ನೀವು ಮತ್ತೊಮ್ಮೆ ಇಡೀ ರಾಷ್ಟ್ರದ ಉತ್ಸಾಹವನ್ನು ಹೆಚ್ಚಿಸಿದ್ದೀರಿ ಮತ್ತು ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದೀರಿ. ಪ್ಯಾರಿಸ್‌ನ ಶಿವಾಜಿ ಸ್ಟೇಡಿಯಂನಿಂದ, ನೀವು ಮುಂದಿನ ವರ್ಷಗಳಲ್ಲಿ ನಮ್ಮೆಲ್ಲರಿಗೂ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗುತ್ತೀರಿ ಎಂದು ನಾನು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next