Advertisement

ಶಿಕ್ಷಣದ ಜೊತೆಗೆ ಕ್ರೀಡೆವೃದ್ಧಿಯಿಂದ ದೇಶಕ್ಕೆ ಕೀರ್ತಿ

11:42 AM Aug 26, 2018 | Team Udayavani |

ಪಿರಿಯಾಪಟ್ಟಣ: ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಲ್ಲಿ ದೇಶದ ಕೀರ್ತಿ ಹೆಚ್ಚಿಸಬಹುದು ಎಂದು ಶಾಸಕ ಕೆ ಮಹದೇವ್‌ ತಿಳಿಸಿದರು.

Advertisement

ಅವರು ತಾಲೂಕಿನ ಬೆಟ್ಟದಪುರದ ಸಲೀಲಾಖ್ಯ ಮಠದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತೆಲಗಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯೋಜಿಸಿದ್ದ 2018-19ನೇ ಸಾಲಿನ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕೀಡೆ ಮಕ್ಕಳ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿದೆ ಇದರಿಂದ ಮಾನಸಿಕ ಬುದ್ಧಿ ಮತ್ತು ಆರೋಗ್ಯ ವೃದ್ಧಿಸುತ್ತದೆ ಎಂದರು ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಸೋತಾಗ ಹತಾಶರಾಗದೆ ಗೆದ್ದಾಗ ಬೀಗದೆ ಎಲ್ಲವನ್ನು ಸರಿಸಮಾನವಾಗಿ ತೆಗೆದುಕೊಂಡು ಹೋಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಟ್ಟದಪುರ ಮಠದ ಮತ್ತು ಕನ್ನಡ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶ್ರದ್ಧಾಭಕ್ತಿ ಅತ್ಯಅವಶ್ಯಕ ಕಠಿಣ ಪರಿಶ್ರಮ ಹಾಗು ಶಿಸ್ತನ್ನು ವೃದ್ಧಿಸಿಕೊಂಡರೆ ನಾವು ಉತ್ತುಂಗದ ಸ್ಥಾನವನ್ನು ಏರಬಹುದು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಇ ಬಿ ವೆಂಕಟೇಶ್‌ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸಾು ತಾಪಂ ಸದಸ್ಯರಾದ ಮಲ್ಲಿಕಾರ್ಜುನ್‌, ಪಂಕಜ, ಗ್ರಾಪಂ ಸದಸ್ಯರಾದ ಗೀರಿಶ್‌, ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಮಂಜುನಾಥ್‌ ದೈಹಿಕ ಪರೀಕ್ಷಕ ಮಹದೇವಪ್ಪ ಮುಖಂಡರಾದ ಟಿ.ರಘುನಾಥ್‌ ವಿದ್ಯಾಶಂಕರ್‌, ಉದಯ್‌, ಬಿ.ಜೆ. ದೇವರಾಜು, ಇನ್ನು ಮುಂತಾದವರು ಇದ್ದರು.

Advertisement

ಸಾರ್ವಜನಿಕರ ಆಕ್ರೋಶ ಬೆಟ್ಟದಪುರದ ಕ್ರಿಡಾಕೂಟ್ಟಕ್ಕೆ ಈಚೂರು, ಭುವನಹಳ್ಳಿ, ಇನ್ನು ಮುಂತಾದ ಶಾಲಾಮಕ್ಕಳನ್ನು ಸರಕು ಸಾಗಾಣೆ ವಾಹನದಲ್ಲಿ ಆಡು ಕುರಿಗಳಂತೆ ತುಂಬಿಕೊಂಡು ಬಂದ ದೃಶ್ಯ ಎಂತವರನ್ನು ಮನ ಕಲಕುವಂತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next