ಎಲ್ಲ ಶಾಲೆಗಳ ಮುಖ್ಯಸ್ಥರು //www.kseeb.kar.nic.in ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ಲಭ್ಯ ತಂತ್ರಾಂಶವನ್ನು ಬಳಸಿ ಮಾ.6ರೊಳಗೆ ಆಯಾ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಬೇಕು ಎಂದು ಸೂಚಿಸಲಾಗಿದೆ.
Advertisement
ಲಾಗಿನ್ ಆದ ಕೂಡಲೇ ಇಂಟರ್‌ನಲ್ ಮಾರ್ಕ್ಸ್ ಎಂಟ್ರಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಶೇ.75ರಷ್ಟು ಹಾಜರಾತಿ ಹೊಂದಿರುವ ಬಗ್ಗೆ “ಎಸ್’ ಅಥವಾ “ನೋ’ ಎಂದು ನಮೂದಿಸಿ ವ್ಯೂ ಬಟನ್ ಕ್ಲಿಕ್ ಮಾಡಬೇಕು.
ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮಾ.27ರಂದು ಪ್ರಕಟಿಸಿ, 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ತರಗತಿಗಳನ್ನು ಮೇ 18ಕ್ಕೆ ಆರಂಭಿಸಲು ಎಲ್ಲ ಪಿಯು ಕಾಲೇಜುಗಳ ಆಡಳಿತ ಮಂಡಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶ ನೀಡಿದೆ.
Related Articles
Advertisement
ಮೇ 18ರಂದು ದ್ವಿತೀಯ ಪಿಯುಸಿ ತರಗತಿ ಆರಂಭಿಸಬೇಕು. ಎಸೆಸೆಲ್ಸಿ ಫಲಿತಾಂಶ ಅಷ್ಟರೊಳಗೆ ಪ್ರಕಟವಾಗಿದ್ದರೆ ಪ್ರವೇಶ ಪ್ರಕ್ರಿಯೆ ಆರಂಭಿಸಬಹುದು ಎಂದು ಇಲಾಖೆ ತಿಳಿಸಿದೆ.