Advertisement

ಭೂಗತ ಪಾತಕಿ ಬಂಧನ

10:07 AM Jan 10, 2020 | Team Udayavani |

ಮುಂಬಯಿ: ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಆರೋಪಿ, ಗ್ಯಾಂಗ್‌ಸ್ಟರ್‌ ಇಜಾಝ್ ಲಕ್ಡಾವಾಲನನ್ನು (50) ಬಿಹಾರ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಸುಲಿಗೆ, ಕೊಲೆ ಪ್ರಯತ್ನ, ಗಲಭೆ ಯತ್ನ ಸೇರಿದಂತೆ 25ಕ್ಕೂ ಹೆಚ್ಚು ಕೇಸುಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.

Advertisement

ಆದರೆ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ಬುಧವಾರ ರಾತ್ರಿ ಪಾಟ್ನಾ ವಸೂಲಿ ನಿಗ್ರಹ ದಳದ ಅಧಿಕಾರಿಗಳು ಆತನನ್ನು ಪಾಟ್ನಾದಲ್ಲಿ ಬಂಧಿಸಿದ್ದಾರೆ. ಬಳಿಕ ಆತನನ್ನು ಮುಂಬಯಿಗೆ ಕರೆತರಲಾಗಿದೆ. ಈತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಮಾಜಿ ಆಪ್ತ ಸಹಚರನಾಗಿದ್ದ. ಹಲವಾರು ವರ್ಷಗಳಿಂದ ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next