Advertisement

ತಾಂತ್ರಿಕ ತಜ್ಞರ ಸಮಿತಿ ಪರಿಶೀಲನೆ

12:03 PM Jan 19, 2017 | Team Udayavani |

ಬೆಂಗಳೂರು: ಮಲ್ಲೇಶ್ವರದ ಮಂತ್ರಿಸ್ಕ್ವೇರ್‌ ಮಾಲ್‌ ಹಿಂಭಾ ಗದ ಗೋಡೆ ಭಾಗ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚಿಸಿರುವ ತಾಂತ್ರಿಕ ತಜ್ಞರ ಸಮಿತಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದೆ. ಮಾಲ್‌ಗೆ ನಿತ್ಯ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸುತ್ತಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾಲ್‌ನ ಸ್ವಾಧೀನಾನುಭವ ಪತ್ರ ವಾಪಸ್ಸು ಪಡೆಯಲಾಗಿದೆ.

Advertisement

ಈ ನಡುವೆ ಮಂತ್ರಿಮಾಲ್‌ ಕಟ್ಟಡದ ಸದಢೃತೆಯ ಬಗ್ಗೆ ವರದಿ ನೀಡಲು ತಜ್ಞರನ್ನೊಳಗೊಂಡ ಸಮಿತಿ ರಚಿಸಿ 15 ದಿನಗಳೊಳಗೆ ವರದಿ ನೀಡುವಂತೆ ಸಮಿತಿಗೆ ಆಯುಕ್ತರು ಸೂಚನೆ ನೀಡಿದ್ದು, ಅದರ ಹಿನ್ನೆಲೆಯಲ್ಲಿ ಬುಧವಾರ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ತಿಪ್ಪಣ್ಣ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್‌ ಜಿ.ಪದ್ಮಾವತಿ, ತಜ್ಞರ ಸಮಿತಿ ವರದಿಯಲ್ಲಿ ಸ್ವಾಧೀನಾನುಭವ ನೀಡಬಹುದು ಎಂದು ತಜ್ಞರು ಸಮಿತಿ ಹೇಳಿದರೆ ಮತ್ತೆ ನೀಡಲಾಗುವುದು ಎಂದು ತಿಳಿಧಿಸಿಧಿದ್ದಾಧಿರೆ.

ಪರಿಶೀಲನೆಗೆ ವಿಘ್ನ: ಗೋಡೆ ಕುಸಿದ ಪ್ರದೇಶ ಅಸುರಕ್ಷಿತವೆನಿಸಿದ ಹಿನ್ನೆಲೆಯಲ್ಲಿ ಸದಸ್ಯರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಗೋಡೆ ಕುಸಿದ ಭಾಗದ ಪರಿಶೀಲನೆಗಾಗಿ ಸಮೀಪದಲ್ಲಿ ಶೀಘ್ರ ರ್‍ಯಾಂಪ್‌ ಸೌಲಭ್ಯ ಮಾಡಿಕೊಡುವಂತೆ ಮಾಲ್‌ ಸಿಬ್ಬಂದಿಗೆ ಸದಸ್ಯರು ಸೂಚನೆ ನೀಡಿದ್ದಾರೆ.

ಪರಿಶೀಲನೆಯ ನಂತರ ಕಟ್ಟಡದ ಸದೃಢತೆ ಮತ್ತು ಸುರಕ್ಷತೆಗೆ ಅವಶ್ಯಕವಿರುವ ಕ್ರಮಗಳ ಬಗ್ಗೆ ಸಮಿತಿ ಶಿಫಾರಸುಗಳನ್ನು ನೀಡಲಿದೆ ಎಂದು ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ತಿಪ್ಪಣ್ಣ ಮಾಹಿತಿ ನೀಡಿದ್ದಾರೆ. ಮಾಲ್‌ 15 ದಿನಗಳ ಕಾಲ ಮುಚ್ಚಿರುವ ಕಾರಣ ಮಾಲ್‌ನ ವಿವಿಧ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಮಳಿಗೆಗಳ ಮಾಲಿಕರು ನಗರದ ವಿವಿಧ ಭಾಗಗಳಲ್ಲಿರುವ ತಮ್ಮದೇ ಶಾಖೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡಿದ್ದಾರೆ.   

ಮಂತ್ರಿ ಮಾಲ್‌ ಸುರಕ್ಷಿತ 
ಇನ್ನೋಟೆಕ್‌ ಎಂಜಿನಿಯರಿಂಗ್‌ ಕನ್ಸಲ್ಟ್ ಪ್ರೈವೇಟ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌.ಗುರುರಾಜ್‌ ಅವರು, ಮಾಲ್‌ನಲ್ಲಿರುವ ಪ್ರತಿ ಮಹಡಿಯನ್ನು ಪರಿಶೀಲಿಸಿದ್ದು ಮಾಲ್‌ನ ಸಾರ್ವಜನಿಕ ಪ್ರದೇಶಗಳು ಸುರಕ್ಷಿತವಾಗಿವೆ ಎಂದು ತಿಳಿಸಿರುವುದಾಗಿ ಮಂತ್ರಿ ಸ್ಕ್ವೇರ್‌ ಸ್ಪಷ್ಟನೆ ನೀಡಿದೆ. ಹಾನಿಯಾದ ಭಾಗದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಾಲ್‌ ಮುಚ್ಚಲಾಗಿದೆ ಎಂದು ಮಂತ್ರಿಮಾಲ್‌ ಸಿಇಒ ಆದಿತ್ಯ ಸಿಕ್ರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next