Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಾರ್ಯಾಗಾರ

11:03 AM Jan 29, 2020 | Suhan S |

ಧಾರವಾಡ: ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೇ ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂದು ಧಾರವಾಡ ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಇ. ಖಾಜಿ ಹೇಳಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಲಾಸಿಕ್‌ ಕೆಎಎಸ್‌-ಐಎಎಸ್‌ ಸ್ಟಡಿ ಸರ್ಕಲ್‌ ಹಾಗೂ ಸ್ಪರ್ಧಾ ಸೂರ್ತಿ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಕ್ಲಾಸಿಕ್‌ ಸಂಸ್ಥೆಯಲ್ಲಿ ನಡೆದ ಮೂರು ದಿನಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಯ ಹೊಂದಾಣಿಕೆ ಹಾಗೂ ಶಿಸ್ತುಬದ್ಧ ಅಧ್ಯಯನದೊಂದಿಗೆ ವಿಷಯಗಳ ಪುನರ್‌ಮನನ ಮಾಡಿಕೊಳ್ಳುವ ಮೂಲಕ ಕಠಿಣ ವಿಷಯಗಳನ್ನು ಸುಲಭವಾಗಿ ಗ್ರಹಿಸಿಕೊಳ್ಳುವತ್ತ ಗಮನ ಹರಿಸಬೇಕೆಂದು ಹೇಳಿದರು.

ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಗೇರ ಮಾತನಾಡಿ, ಮನಸ್ಸು ಮಾಡಿದರೆ ಅಸಾಧ್ಯವೆಂಬುದು ಯಾವುದೂ ಇಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ತಿರುವು ಆಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಶ್ರದ್ಧೆ ಮತ್ತು ಸತತ ಅಧ್ಯಯನದ ಮೂಲಕ ಎದುರಿಸಲು ವಿವಿಧ ಮೂಲಗಳಿಂದ ಜ್ಞಾನ ಸಂಗ್ರಹಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್‌ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್‌. ಉಪ್ಪಾರ ಮಾತನಾಡಿ, ಇಂದಿನ ಸ್ಪ ರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತರಗತಿಯ ಪಠ್ಯಗಳ ಜೊತೆಗೆ ವಿಷಯ ಪರಿಣಿತರ ಮಾರ್ಗದರ್ಶನವನ್ನು ಪಡೆದು ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.

ಐ.ಜಿ. ಚೌಗಲಾ ಪ್ರಾಸ್ತಾವಿಕ ಮಾತನಾಡಿದರು. ಕಲಘಟಗಿ ಬಿಇಒ ಉಮಾದೇವಿ ಬಸಾಪುರ, ಶೈಕ್ಷಣಿಕ ಮಾರ್ಗದರ್ಶಕ ಡಾ| ಎಂ.ವೈ. ಸಾವಂತ, ಪ್ರಾಚಾರ್ಯ ಎಚ್‌.ಎಂ. ಉಡಕೇರಿ ಅತಿಥಿಗಳಾಗಿದ್ದರು. ಸಂಜಯ ಮಾಳಿ, ಮಂಜುನಾಥ ಮರಿತಮ್ಮನವರ, ಅಶೋಕ ಶಿರಹಟ್ಟಿ, ಉದಯ ಕೊಕಟನೂರ, ರವಳನಾಥ ಪಾಟೀಲ ಸೇರಿದಂತೆ ಇತರರು ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳನ್ನು ಬೋಧಿಸಿದರು. ಸಂಯೋಜಕರಾದ ಪ್ರಮೋದ ಬಡಿಗೇರ ಹಾಗೂ ಆನಂದ ಬಾದಾಮಿ ಇದ್ದರು.

Advertisement

ಕ್ಲಾಸಿಕ್‌ ಪಿಯು ಕಾಲೇಜಿನ ಸಂಯೋಜಕಿ ಅಶ್ವಿ‌ನಿ ಸ್ವಾಗತಿಸಿದರು. ಉಪನ್ಯಾಸಕ ರುದ್ರಗೌಡ ಉಪ್ಪಿನ, ನಿರೂಪಿಸಿ, ವಂದಿಸಿದರು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next