Advertisement

Exams: ಪರೀಕ್ಷೆ ಸವಾಲುಗಳು ಮಾತ್ರ ಬದುಕು ಅಲ್ಲ 

03:30 PM May 23, 2024 | Team Udayavani |

ಪರೀಕ್ಷೆಗಳು ಜೀವನದ ಮೆಟ್ಟಿಲುಗಳು ವಿನಃ, ಜೀವನದ ಗತಿ ಅಲ್ಲ ಅನ್ನುವುದನ್ನು ಸಾಂದರ್ಭಿಕವಾಗಿ ಅರಿಯುವುದು ಆವಶ್ಯಕವಾದ ವಿಚಾರ ಧಾರೆಯೇ ಸರಿ.

Advertisement

ಬದುಕಿನ ಓಟದಲ್ಲಿ ಪರೀಕ್ಷೆಗಳು ಸವಾಲುಗಳಾಗಿ ರೂಪುಗೊಂಡಿವೆ,  ಅನಿಶ್ಚಿತ ಬದುಕಿನಲ್ಲಿ ನಿಶ್ಚಿತ ಹೋರಾಟ ಎಂಬಂತೆ ಮಾರ್ಮಿಕವಾಗಿ ಪರಿಣಮಿಸಿವೆ. ಪ್ರಸ್ತುತ ದಿನಗಳಲ್ಲಿ  ಪರೀಕ್ಷೆಗಳು ಜೀವನದ ಸಂಕೋಲೆಯನ್ನು ಕಸಿದುಕೊಳ್ಳುತ್ತಿವೆ, ಪರೀಕ್ಷೆಗಳೇ ಜೀವನವನ್ನು ರೂಪಿಸುತ್ತವೆ, ಇದರಿಂದಲೇ ಜೀವನ ಅನ್ನುವ ಹಾಗೆ ಇತ್ತೀಚಿನ ದಿನಗಳು ಬೆಳೆದು ಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ವೈಜ್ಞಾನಿಕ ತಳಹದಿಯ ಮೇಲೆ ಇರಬೇಕಾದ ಆಧುನಿಕ ಜನರು ಅವೈಜ್ಞಾನಿಕ ಪದ್ಧತಿ ಹಾಗೆ ವರ್ತಿಸುತ್ತಿರುವುದು ಬೇಸರದ ಸಂಗತಿಯಾಗಿದೆ.ಸಣ್ಣಸಣ್ಣ ಮಕ್ಕಳ ಮೇಲೆ ಭಾರದ ಪಾಟಿಚೀಲವನ್ನು ಹೆಗಲಿಗೇರಿಸಿ ಶಾಲೆಗೆ  ಕಳಿಸುವ  ಪರಿಪಾಠ ತಂದೆ-ತಾಯಿಗಳಿಗೆ  ಗೀಳಾಗಿ ಪರಿಣಮಿಸಿವೆ. ಮಕ್ಕಳು ಸಹ ಇದೆ ನಮ್ಮ ಕೆಲಸವಾಗಿದೆ, ಎಂದುಕೊಂಡು ಶಿರಸಾವಹಿಸಿ  ಪರಿಪಾಲಿಸುತ್ತಿವೆ.

ಶಿಕ್ಷಣದ ವ್ಯವಸ್ಥೆಯು ಕೂಡ ಇದಕ್ಕೆ ಮುಂಚೂಣಿಯಲ್ಲಿ ಇದ್ದಂತೆ ಸಾಕಷ್ಟು ಶಿಕ್ಷಣ ಕ್ಷೇತ್ರಗಳು ಮೊಸಳೆ ಬಾಯಿಯಂತೆ ಎಲ್ಲ ಕಡೆಗಳಲ್ಲಿಯೂ  ತೆರೆದುಕೊಂಡಿರುವುದು ಸೋಜಿಗ. ಹೆಚ್ಚುಹೆಚ್ಚು ಅಂಕ ಗಳಿಸಲೆಂದು ಪಾಲನೆ ಪೋಷಣೆ ಮಾಡಬೇಕಾದ ಪಾಲಕರು ಅಧಿಕಾರ ವಹಿಸಿದವರಂತೆ ಮಕ್ಕಳಿಗೆ ಆಜ್ಞೆ ಮಾಡುತ್ತಿರುವುದು  ಸಹಜ ಸ್ಥಿತಿಗತಿಗಳಾಗಿವೆ ಇದು ಸತ್ಯ. ಎಲ್ಲವನ್ನೂ ಹಸುಳೆಯಿಂದಲೇ ಕಲಿಯಲು ಶುರುಮಾಡಿದ್ದು ಕಾರಣ, ಕಲಿಯುಗದ ಆರಂಭ ಈಗ ಶುರುವಾಗಿದೆ ಎಂದು  ಭಾಸವಾಗುತ್ತಿದೆ.

ಮಕ್ಕಳ ಮೇಲೆ ಅತಿಯಾದ ಒತ್ತಡ ಉಂಟಾಗುತ್ತದೆ ಎನ್ನುವ ಮನೋಭಾವನೆ ಸಹ ಇಲ್ಲ, ಮುಗ್ಧ ಮನಸ್ಸುಗಳು ಆ ತುಂಟಾಟ, ನಗು ಎಲ್ಲವನ್ನೂ ಪರೀಕ್ಷೆಗಳ ಅಂಕಗಳ ಕೇಂದ್ರದಲ್ಲಿ ಲೀನವಾಗಿವಿ ಹೋಗಿವೆ. ಬದಲಾವಣೆ ಜಗದ ನಿಯಮ ಅದಕ್ಕಾಗಿ ಇದೆÇÉಾ ನಡೆಯುತ್ತಿರಬಹುದು. ಪರೀಕ್ಷೆಯ ಅಂಕಗಳ ಸಲುವಾಗಿ  ನೂರಾರು ಸಣ್ಣಸಣ್ಣ ವಯಸ್ಸಿನ ಮುಗª ಮನಸ್ಸಿನ ಮಕ್ಕಳ ಪ್ರಾಣಗಳು  ಹಾರಿಹೋಗುತ್ತಿರುವುದು ನಿರಂತರವಾಗಿರುವುದು ಅನ್ನುವುದು ಕೂಡ ಕಟುಸತ್ಯ.

Advertisement

ಏಕೆಂದರೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ನಾವುನೀವೆಲ್ಲರೂ ಸಹಜವಾಗಿ ನೋಡುತ್ತೇವೆ. ಹಾಗಾಗಿ ಅಂಕಗಳಿಗಾಗಿ ಪ್ರಾಣ ಬಿಡುವ ಮುನ್ನ ಜೀವನ ಎಂಬ ಪರೀಕ್ಷೆ ಎದುರಿಸಲು ನಾವೆಲ್ಲರೂ ಸಿದ್ಧರಿರಬೇಕಾಗಿದ್ದು ಬಹಳ ಅಗತ್ಯವಾಗಿ ಇದೆ.

-ಸುನೀಲ ತೇಗೂರ

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next