Advertisement

ಇತಿಹಾಸ ಮರು ರಚನೆ ಅತ್ಯವಶ್ಯ

10:55 AM Apr 16, 2018 | Team Udayavani |

ಹೊಸದಿಲ್ಲಿ: ಇತಿಹಾಸದ ಮರುರಚನೆಯ ಆವಶ್ಯಕತೆಯ ಕುರಿತಂತೆ ನಡೆಯುತ್ತಿರುವ ಚರ್ಚೆಗಳು ಅನವಶ್ಯಕವಾಗಿದ್ದು, ಈಗಾಗಲೇ ಇತಿಹಾಸವನ್ನು ವರ್ಣರಂಜಿತವನ್ನಾಗಿಸುವ ಅಂಶಗಳನ್ನು ತೆಗೆಯುವುದು ಈ ಹೊತ್ತಿನ ಆವಶ್ಯಕತೆಯಾಗಿದೆ ಎಂದು ಭಾರತೀಯ ಇತಿಹಾಸ ಸಂಶೋಧನಾ ಇಲಾಖೆ (ಐ.ಸಿ.ಎಚ್‌.ಆರ್‌.) ಮುಖ್ಯಸ್ಥ ಅರವಿಂದ್‌ ಜಾಮ್ಖೇಡ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಇದೇ ವೇಳೆ, ಐಸಿಎಚ್‌ಆರ್‌ ಸಂಸ್ಥೆಯು ಯಾವುದೇ ಇತಿಹಾಸಕಾರನಿಗೆ ಚರಿತ್ರೆಯನ್ನು ಹೀಗೇ ಬರೆಯಬೇಕೆಂದು ಆದೇಶಿಸುವುದಿಲ್ಲ ಅಥವಾ ದೇಶದ ನಾನಾ ವಿದ್ಯಾಸಂಸ್ಥೆಗಳಿಗೆ ಚರಿತ್ರೆಯ ಪಠ್ಯಕ್ರಮವನ್ನೂ ನಿಗದಿಗೊಳಿಸುವುದಿಲ್ಲ. ಆದರೆ, ನೈಜ ಇತಿಹಾಸವನ್ನು ಪುನಾರಚಿಸುವಂತೆ ಮಾತ್ರ ಸಂಸ್ಥೆ ಸೂಚಿಸುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅನೇಕ ವಿದ್ವಾಂಸರೂ ಆಯಾ ಕಾಲಘಟ್ಟಕ್ಕೆ ಬದಲಾದ ಇತಿಹಾಸವನ್ನು ಗುರುತಿಸಿ ಇತಿಹಾಸದ ಮರು ದಾಖಲು ಆಗಬೇಕೆಂದಿದ್ದಾರೆ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next