Advertisement
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪ ರಾಷ್ಟ್ರಪತಿ ವಿರುದ್ಧ ಸಾಕ್ಷಾಧಾರ ಬಹಿರಂಗ ಮಾತ್ರವಲ್ಲ, ಇದಲ್ಲದೇ ಇದರ ಹಿಂದಿರುವ ರಾಜಕಾರಣಗಳು, ರಾಜಕೀಯ ಪಕ್ಷಗಳು ಯಾವ್ಯಾವು ಎಂಬುದರ ಬಣ್ಣವೂ ಬಯಲಾಗುತ್ತದೆ ಎಂದರು.
Related Articles
Advertisement
ಶಾಸಕ ಶಿವಾನಂದ ಪಾಟೀಲ್ ಬ್ಲಾಕ್‍ಮೇಲರ್
ಚುನಾವಣೆ ಬರುತ್ತಲೇ ಜಿಲ್ಲೆಯಲ್ಲಿ ಬ್ಲಾಕ್‍ಮೇಲ್ ಲೀಡರ್ ರಾಜಕಾರಣ ಹೆಚ್ಚುತ್ತದೆ. ಬಸವನಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆಗೆ ನೀಡಿರುವ ಸವಾಲು ಕೂಡ ಬ್ಲಾಕ್‍ಮೇಲ್ ತಂತ್ರವೇ. ಹೀಗಾಗಿ ಇಂಥವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಯತ್ನಾಳ್ ಕಿಡಿ ಕಾರಿದರು.
ಕೆಲವರಿಗೆ ಇಂಥ ಹೇಳಿಕೆಗಳ ಹುಚ್ಚು ಇರುತ್ತದೆ. ಬಬಲೇಶ್ವರಕ್ಕೆ ಬರುತ್ತೇನೆ, ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದೆಲ್ಲ ರಾಜಕೀಯ ಬ್ಲಾಕ್‍ಮೇಲ್ ಮಾಡುವ ಅಂಥವರ ಹೇಳಿಕೆಗೆಲ್ಲ ನಾನು ಪ್ರತಿಯಕ್ರಿಯಿಸುವ ಅಗತ್ಯವೂ ಇಲ್ಲ ಎಂದು ಸಿಡುಕಿದರು.
ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಮಾಜಿ ಸಿ.ಎಂ. ಮಕ್ಕಳಿದ್ದಾರೆ ಎಂದು ಶಾಸಕ ಯತ್ನಾಳ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಬಿಜೆಪಿ ಪಕ್ಷಕ್ಕಿಲ್ಲ, ಅವರನ್ನು ರಕ್ಷಿಸುತ್ತಿರುವ ಶಕ್ತಿ ಯಾವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ , ”ದೇವರೇ ನನ್ನ ರಕ್ಷಕ ಹಾಗೂ ದೇವರೇ ನನಗೆ ದೊಡ್ಡ ಶಕ್ತಿ” ಎಂದರು.