Advertisement
ಷರೀಫ್ ಪತ್ನಿ ಖುಲ್ಸುಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಷರೀಫ್, ಮರ್ಯಮ್ ಅಲ್ಲಿಯೇ ಉಳಿದುಕೊಂಡಿದ್ದಾರೆ. ವಾರ ಕಾಲ ತೀರ್ಪು ಪ್ರಕಟಿಸುವುದನ್ನು ಮುಂದೂಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಅದಕ್ಕೆ ಕೋರ್ಟ್ ಸಮ್ಮತಿಸಿರಲಿಲ್ಲ.
ಲಂಡನ್‌ನ ವೈಭವೋಪೇತ ಪ್ರದೇಶವಾಗಿರುವ ಪಾರ್ಕ್ ಲೇನ್‌ನಲ್ಲಿರುವ ಅದ್ಧೂರಿ ಕಟ್ಟಡವಿದು. ಇಲ್ಲಿಯೇ ಷರೀಫ್ ಕುಟುಂಬದ ಸದಸ್ಯರು 4 ಅಪಾರ್ಟ್‌ಮೆಂಟ್ ಖರೀದಿಸಿ ದ್ದಾರೆ. ತೆರಿಗೆ ಸ್ವರ್ಗ ಪ್ರದೇಶಗಳಾಗಿರುವ ಬ್ರಿಟಿಷ್ ವರ್ಜಿನ್ ದ್ವೀಪಸಮೂಹ, ಪನಾಮಾ, ಗುರೆನ್ಸಿಯಲ್ಲಿ ಹೂಡಿಕೆ ಮಾಡಿರುವ ಕಂಪನಿಗಳು ಇಲ್ಲಿ ಅಪಾರ್ಟ್‌ಮೆಂಟ್ ಖರೀದಿ ಮಾಡುತ್ತವೆ. ನೆಸ್ಕೋಲ್ ಲಿಮಿಟೆಡ್ ಎಂಬ ಕಂಪನಿ ಮೂಲಕ 1993ರ ಜೂನ್‌ನಲ್ಲಿ ಷರೀಫ್ ಕುಟುಂಬಸ್ಥರು ಮೊದಲ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಅವೆನ್ ಫೀಲ್ಡ್‌ನಲ್ಲಿ ಈ ಅಪಾರ್ಟ್‌ಮೆಂಟ್‌ಗಳಲ್ಲದೆ ಮತ್ತೂಂದು ಆಸ್ತಿಯೂ ಇದೆ. ಆದರೆ ಅದು ಅಕ್ರಮದ ವ್ಯಾಪ್ತಿಗೆ ಒಳಪಟ್ಟುದಲ್ಲ.
Related Articles
2016ರ ಏ.3ರಂದು ಭಾರತ, ಪಾಕಿಸ್ತಾನ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರ ಕುಟುಂಬಗಳು ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿವೆ ಎಂದು ಅಂತಾ ರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ವರದಿ ಮಾಡಿತ್ತು. ಅದರಲ್ಲಿ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಕುಟುಂಬಸ್ಥರ ಹೆಸರೂ ಇತ್ತು. 2016ರ ಆ.30ರಂದು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ಸುಪ್ರೀಂ ಕೋರ್ಟಲ್ಲಿ ಕೇಸು ದಾಖಲಿಸಿದ್ದರು.
Advertisement
ಸತ್ಯ ಹೇಳಿದ್ದಕ್ಕೆ ಪಾಕಿಸ್ತಾನೀಯ ರನ್ನು ಕಠಿಣ ಸರಳು ಗಳಿಂದ ಬಂಧಿಸಲಾಗಿದೆ. ಅವರನ್ನು ಅದರಿಂದ ಮುಕ್ತ ಗೊಳಿಸು ವವರೆಗೂ ನನ್ನ ಹೋರಾಟ ಮುಂದು ವರಿಯುತ್ತದೆ.ನವಾಜ್ ಷರೀಫ್, ಮಾಜಿ ಪ್ರಧಾನಿ