ಇಸ್ಲಾಮಾಬಾದ್: ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನಾಲ್ಕು ವರ್ಷಗಳ ಸ್ವಯಂ ಘೋಷಿತ ಗಡಿಪಾರಿನ ನಂತರ ಶನಿವಾರ (ಅಕ್ಟೋಬರ್ 21) ಪಾಕಿಸ್ತಾನಕ್ಕೆ ವಾಪಸ್ ಆಗಲಿದ್ದು, ಪಾಕ್ ನ ಸಾರ್ವತ್ರಿಕ ಚುನಾವಣೆಗೂ ಮೊದಲಿನ ಈ ಬೆಳವಣಿಗೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Karkala ನಗರ ಠಾಣಾ ಹೆಡ್ ಕಾನ್‌ಸ್ಟೇಬಲ್ ಶೃತಿನ್ ಶೆಟ್ಟಿ ನಾಪತ್ತೆ
ಭ್ರಷ್ಟಾಚಾರ ಆರೋಪದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ ನಂತರ ರಾಜಕೀಯದಿಂದ ಜೀವಿತಾವಧಿವರೆಗೆ ರಾಜಕೀಯದಿಂದ ಅನರ್ಹಗೊಂಡಿದ್ದ ಷರೀಫ್ ಸ್ವಯಂ ಆಗಿ ದುಬೈಗೆ ಗಡಿಪಾರುಗೊಂಡಿದ್ದರು ಎಂದು ವರದಿ ವಿವರಿಸಿದೆ.
ಭದ್ರತಾ ಬಿಕ್ಕಟ್ಟು, ಆರ್ಥಿಕ, ರಾಜಕೀಯ ಸಂಘರ್ಷದಿಂದ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನದ ಸಾರ್ವಜನಿಕ ಚುನಾವಣೆ 2024ರ ಜನವರಿಯಲ್ಲಿ ನಡೆಯಲಿದೆ. ಪಿಟಿಐ ನಾಯಕ ಇಮ್ರಾನ್ ಖಾನ್ ಜೈಲಿನಲ್ಲಿದ್ದು, ನವಾಜ್ ಷರೀಫ್ ಆಗಮನದಿಂದ ರಾಜಕೀಯ ಲೆಕ್ಕಾಚಾರ ಗರಿಗೆದರುವಂತಾಗಲಿದೆ.
ಇದು ಭರವಸೆಯ ಮತ್ತು ಸಂಭ್ರಮದ ಸಮಯವಾಗಿದೆ. ನವಾಜ್ ಷರೀಫ್ ಅವರ ಪುನರಾಗಮನ ಪಾಕಿಸ್ತಾನದ ಆರ್ಥಿಕತೆ ಮತ್ತು ಜನರಿಗೆ ಅನುಕೂಲ ಕಲ್ಪಿಸಲಿದೆ ಎಂದು ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ಪಿಎಂಎಲ್-ಎನ್)ನ ಹಿರಿಯ ಮುಖಂಡ ಖ್ವಾಜಾ ಮುಹಮ್ಮದ್ ತಿಳಿಸಿದ್ದಾರೆ.
ನವಾಜ್ ಷರೀಫ್ ಅವರು ಕೆಲವು ವರ್ಷಗಳ ಕಾಲ ದುಬೈನಲ್ಲಿ ವಾಸವಾಗಿದ್ದು, ಇದೀಗ ಇಸ್ಲಾಮಾಬಾದ್ ಗೆ ಹಿಂದಿರುಗಲಿದ್ದು, ನಂತರ ಲಾಹೋರ್ ಗೆ ಆಗಮಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ರಾಲಿಯೊಂದಿಗೆ ಷರೀಫ್ ಅವರನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಮುಹಮ್ಮದ್ ತಿಳಿಸಿದ್ದಾರೆ.