Advertisement

ಚೀನದ ಲೀ ಕ್ಸುರುಯಿ ಬ್ಯಾಡ್ಮಿಂಟನ್‌ಗೆ ವಿದಾಯ

11:41 PM Oct 18, 2019 | Team Udayavani |

ಬೀಜಿಂಗ್‌: ಚೀನದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್‌ ತಾರೆ ಲೀ ಕ್ಸುರುಯಿ ವಿದಾಯ ಹೇಳಿದ್ದಾರೆ. ಇವರ ನಿವೃತ್ತಿಯನ್ನು ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟ (ಬಿಡಬ್ಲ್ಯುಎಫ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿದೆ.

Advertisement

ಲೀ ಒಟ್ಟಾರೆ 14 ಸೂಪರ್‌ಸೀರೀಸ್‌ ಗೆದ್ದಿದ್ದಾರೆ. ಅಮೋಘ ನಿರ್ವಹಣೆಗಾಗಿ 2013ರಲ್ಲಿ ಬಿಡಬ್ಲ್ಯುಎಫ್ ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದು ಇವರ ಮಹಾನ್‌ ಸಾಧನೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬೆಳ್ಳಿ ಪದಕ ಪಡೆದಿದ್ದಾರೆ. ಆದರೆ ಇಲ್ಲಿ ಚಿನ್ನದ ಪದಕ ಗೆಲ್ಲುವುದು ಅವರ ಕನಸಾಗಿತ್ತು. ಆದರೆ ಇದು ನನಸಾಗಲೇ ಇಲ್ಲ.

ಕಳೆದ ವರ್ಷದಿಂದ ಲೀಗೆ ಗಾಯದ ಸಮಸ್ಯೆ ಎದುರಾಗಿತ್ತು. ಇದರಿಂದ ಅವರು ಚೇತರಿಕೆ ಕಾಣಲೇ ಇಲ್ಲ. ಹೀಗಾಗಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ ಎಂದು ಬಿಡಬ್ಲ್ಯುಎಫ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next