ಕಾರವಾರ: ವಿಧಾನ ಪರಿಷತ್ ಸದಸ್ಯರಾಗಿದ್ದ ಶ್ರೀಕಾಂತ್ ಎಲ್. ಘೋಟ್ನೇಕರ್ ಅವರ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ಮಂಗಳವಾರ ಕಾರವಾರದ ಎರಡನೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.
ಕಾರವಾರದ ಪ್ರಸಿದ್ಧ ನ್ಯಾಯವಾದಿ ಜಿ. ಟಿ. ನಾಯ್ಕ ಅವರು ಈ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ಅವರ ಪರವಾಗಿ ವಾದ ಮಂಡಿಸಿದ್ದರು.
ದಲಿತ ವ್ಯಕ್ತಿ ಒಬ್ಬರಿಗೆ ನಿಂದನೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಘೋಟ್ನೇಕರ ಅವರ ವಿರುದ್ಧ 2019 ರಲ್ಲಿ ದಾಖಲಾಗಿತ್ತು. ಜಾಮೀನು ಪಡೆಯಲು ಜಿಲ್ಲಾ ನ್ಯಾಯಾಲಯ, ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್.ಎಲ್. ಘೋಟ್ನೇಕರ ಅವರು ಪ್ರಯತ್ನಿಸಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಶರಣಾಗಿ ಜಾಮೀನು ಪಡೆಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಆ ಹಿನ್ನೆಲೆಯಲ್ಲಿ ಎರಡನೇ ಸೆಷನ್ಸ್ ನ್ಯಾಯಾಧೀಶರ ಎದುರು ಹಾಜರಾದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು , ನ್ಯಾಯವಾದಿ ಜಿ. ಟಿ ನಾಯ್ಕ ಅವರ ಮುಖಾಂತರ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಎಸ್.ಎಲ್. ಘೋಟ್ನೇಕರ್ ಅವರ ಶರಣಾಗತಿಯನ್ನು ಪರಿಗಣಿಸಿದ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರಿ ಮಾಡಿದೆ.
ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ಅವರ ವಿರುದ್ಧ ಹಳಿಯಾಳದಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ಕಾರವಾರದ ಎರಡನೇ ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರಿ ಮಾಡಿದೆ. ಕಾರವಾರದ ನ್ಯಾಯಾಲಯದಲ್ಲಿ ಜಾಮೀನಿಗೆ ಪ್ರಯತ್ನಿಸುವಂತೆ ಸುಪ್ರಿಂಕೋರ್ಟ ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರಿಗೆ ನಿರ್ದೇಶನ ನೀಡಿತ್ತು.
– ಜಿ. ಟಿ. ನಾಯ್ಕ ,ವಕೀಲರು, ಕಾರವಾರ