Advertisement
ನಾರಾಯಣಪುರ ಬಲದಂಡೆ 5ಎ ಶಾಖೆ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ತಾಲೂಕಿನಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಅನಿ ರ್ಧಿಷ್ಠ ಧರಣಿ 70 ದಿನಕ್ಕೆ ಕಾಲಿಟ್ಟಿದೆ. ಕೇವಲ ಪಾಮನಕಲ್ಲೂರು, ಅಮಿನಗಡ, ವಟಗಲ್, ಅಂಕುಶದೊಡ್ಡಿ ಪಂಚಾಯಿತಿಗಳಿಗೆ ಮಾತ್ರ ಸೀಮಿತವಾಗಿದ್ದ ರೈತರ ಹೋರಾಟ ವ್ಯಾಪ್ತಿ ಈಗ ಮತ್ತಷ್ಟು ವಿಸ್ತಾರವಾಗಿದೆ. ತಲೆಖಾನ್, ಮೆದಕಿನಾಳ, ಬಪೂ³ರ, ಗುಂಡಾ ಸೇರಿ ಹಲವು ಕಡೆಗಳಿಂದ ರೈತರ ಆಗಮನ ಶುರುವಾಗಿದೆ. ಹೀಗಾಗಿ ಆಶ್ಚರ್ಯಗೊಂಡ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಈ ಹೋರಾಟದ ಕಾವು ಇರುವ ಹಳ್ಳಿಗಳಿಗೆ ನುಗ್ಗಿದ್ದಾರೆ. ತಮ್ಮ ಬೆಂಬಲಿಗ ಪಡೆ, ರೈತರ ನಡುವಿನ ಮತ್ತೂಂದು ಪರ್ಯಾಯ ಗುಂಪಿನ ಮೂಲಕ ಈ ಹಳ್ಳಿಗಳಲ್ಲಿ ಪರೇಡ್ ನಡೆಸಿದ್ದಾರೆ.
ಆರಂಭವಾದ ವಟಗಲ್ ಗ್ರಾಮದಿಂದಲೇ ಸಂಚಾರ ಶುರು ಮಾಡಿದರು. ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿನ ಜನರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಕೆಲವು ಕಡೆ ಅವರ ಭಾಷಣಕ್ಕೆ ಅಪಸ್ವರಗಳು ಕೇಳಿ ಬಂದವು. ವಟಗಲ್, ಹಿಲಾಲಪುರ, ಹರ್ವಾಪುರ ಗ್ರಾಮಗಳಲ್ಲಿ ಸುತ್ತಿದ ಮಾಜಿ ಶಾಸಕ ನಾನು 5ಎ ಕಾಲುವೆ ಹೋರಾಟದ ವಿರುದ್ಧವಿಲ್ಲ. ಇದು ಜಾರಿಯಾಗದು, ನೀರಿನ ಹಂಚಿಕೆ ಇಲ್ಲ. ನಂದವಾಡಗಿ ಏತ ನೀರಾವರಿ ಮೂಲಕವೇ ನೀರು ಕೊಡುವೆ, ಮತ್ತೂಮ್ಮೆ ಚುನಾಯಿತನಾಗಲು ನೆರವಾಗಿ ಎಂದು ಮನವಿ ಮಾಡಿಕೊಂಡರು. ಪೊಲೀಸ್ ಭದ್ರತೆ: ಮಸ್ಕಿ ಉಪಚುನಾವಣೆ ಇನ್ನು ಘೋಷಣೆಯೇ ಆಗಿಲ್ಲ. ಆದರೆ 5ಎ ಕಾಲುವೆ ಇಶ್ಯೂ ಸೇರಿ ಇತರೆ ವಿರೋಧಗಳ ನಿವಾರಣೆಗೆ ಈಗಿನಿಂದಲೇ ತಮ್ಮ ಬೆಂಬಲಿಗರ ಪಡೆಯೊಂದಿಗೆ ಹಳ್ಳಿ ಸಂಚಾರ ಆರಂಭಿಸಿ ಅಲ್ಲಿನ ರೈತರು, ಜನರ ಮನವೊಲಿಸುವ ಕಸರತ್ತು ನಡೆಸಿದರು. ಆದರೆ ಕೆಲವು ಕಡೆಗಳಲ್ಲಿ ವಾಗ್ವಾದ, ವಿಕೋಪದ ಸನ್ನಿವೇಶ ಕಾರಣಕ್ಕೆ ಖಾಕಿ ಪಡೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ರಿಕೆ ಎಸ್ಕಾರ್ಟ್ ಮಾಡುತ್ತಿದೆ. ಮಾನ್ವಿ ಸಿಪಿಐ ದತ್ತಾತ್ರೇಯ, ಕವಿತಾಳ ಠಾಣೆಯ ಪಿಎಸ್‌ಐ ವೆಂಕಟೇಶ ಮಾಡಗಿರಿ ಸೇರಿ ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ತೆರಳುವ ಹಳ್ಳಿಗಳಿಗೆಲ್ಲ ಹಾಜರಿಯಾದರು. ಕೆಲವು ಕಡೆಗಳಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಇನ್ನು ಹಳ್ಳಿ ತಲುಪುವ ಮುನ್ನವೇ ಪೊಲೀಸರು ಮುಂಚಿತವಾಗಿಯೇ ತೆರಳಿ ಅಲ್ಲಿನ ಪರಿಸ್ಥಿತಿ ಅರಿಯುತ್ತಿದ್ದರು. ಈ ಸಂಗತಿ ಹಲವು ರೀತಿ ಚರ್ಚೆಗೆ ಗ್ರಾಸವಾಯಿತು.
Related Articles
Advertisement
*ಮಲ್ಲುಕಾರ್ಜುನ ಚಿಲ್ಕರಾಗಿ