Advertisement

ಬೆನ್ನಿಗೆ ಚೂರಿ ಹಾಕಿದ ಜೆಡಿಎಸ್‌ಗೆ ಮರಳಲ್ಲ: ರಾಜಣ್ಣ

07:20 PM Dec 06, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜನರ ಮನೆ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ಕೊನೆಯುಸಿರು ಇರುವವರೆಗೆ ಜನಸೇವೆ ಮಾಡುತ್ತೇನೆ. ಆದರೆ ಯಾವುದೇ ಕಾರಣಕ್ಕೂನಂಬಿಕೆ ದ್ರೋಹ ಮಾಡಿದ ಜೆಡಿಎಸ್‌ಗೆ ವಾಪಸ್‌ ಹೋಗುವುದಿಲ್ಲ ಎಂದು ಮಾಜಿ ಶಾಸಕ ಎಂ. ರಾಜಣ್ಣ ಸ್ಪಷ್ಟಪಡಿಸಿದರು.

Advertisement

ಶಿಡ್ಲಘಟ್ಟ ನಗರದಲ್ಲಿ ತಮ್ಮ ಅಭಿಮಾನಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದಅವರು,ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ. ಆದರೆಪಕ್ಷದ ಮುಖಂಡರು ಬೆನ್ನಿಗೆ ಚೂರಿ ಹಾಕಿದ್ದರಿಂದಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿ ಫಾರಂ ತಪ್ಪಿ ಸೋಲು ಅನುಭವಿಸುವಂತಾಯಿತು.

ಎರಡು ದಿನದಲ್ಲಿ ಘೋಷಣೆ: ನನ್ನ ಮೇಲೆ ವಿಶ್ವಾಸವಿಟ್ಟು ಹಗಲಿರುಳು ಶ್ರಮಿಸಿದ ಕಾರ್ಯಕರ್ತರು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿದ್ದೇನೆ. ಮುಂದೆಯೂ ಸೇವೆ ಸಲ್ಲಿಸುತ್ತೇನೆ. ಮುಂದಿನ ಎರಡು ದಿನದೊಳಗೆಹಿರಿಯ ಮುಖಂಡರು ಮತ್ತು ಅಭಿಮಾನಿ ಗಳೊಂದಿಗೆ ಸಮಾಲೋಚನೆ ನಡೆಸಿ ರಾಜಕೀಯ ನಿಲುವು ಪ್ರಕಟಿಸುವುದಾಗಿ ಘೋಷಣೆ ಮಾಡಿದರು.

ಅಭಿಮಾನಿಗಳು ಸ್ಪರ್ಧೆ: ಜೆಡಿಎಸ್‌ನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೂ ಸಹ ಟಿಕೆಟ್‌ ನೀಡುವ ವಿಚಾರದಲ್ಲಿ ನಂಬಿಕೆ ದ್ರೋಹ ಮಾಡಿದ್ದು, ಪುನಃ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ತಾವು ಶಾಸಕರಾಗಿ ಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಕ್ಷೇತ್ರದ ಜನರಿಗೆಗೊತ್ತಿದೆ. ಗ್ರಾಪಂ ಚುನಾವಣೆಯಲ್ಲಿ ತಮ್ಮ ಅಭಿಮಾನಿ ಗಳನ್ನುಕಣಕ್ಕಿಳಿಸುತ್ತೇನೆ ಎಂದರು. ಮಾಜಿ ಶಾಸಕ ದಿ.ಎಸ್‌.ಮುನಿಶಾಮಪ್ಪ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನ ನಡೆಸಿಕೊಂಡು ಬಂದಿದ್ದೇನೆ. ನಿಸ್ವಾರ್ಥವಾಗಿ ಸೇವೆ ಮಾಡಿದರೂ ಸಹ ಬೆನ್ನಿಗೆ ಚೂರಿ ಹಾಕಿ ನಂಬಿಕೆದ್ರೋಹ ಮಾಡಿದರು. ಕ್ಷೇತ್ರದ ಶಾಸಕರಾಗಿ ಜನರವಿಶ್ವಾಸಕ್ಕೆಧಕ್ಕೆಬರುವಂತಹಕೆಲಸಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

ಸಭೆಯಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಅಶ್ವತ್ಥನಾರಾಯಣ, ಶಿವಾರೆಡ್ಡಿ, ಅಬ್ಲೂಡು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್‌. ಕನಕಪ್ರಸಾದ್‌, ಕುಂದಲಗುರ್ಕಿ ಗ್ರಾಪಂ ಮಾಜಿ ಅಧ್ಯಕ್ಷ ದೊಣ್ಣಹಳ್ಳಿ ರಾಮಣ್ಣ, ಮಾಜಿ ಉಪಾಧ್ಯಕ್ಷಆಂಜಿನಪ್ಪ, ದೊಡ್ಡತೇಕಹಳ್ಳಿ ಗ್ರಾಪಂ ಮಾಜಿ ಸದಸ್ಯ ಆನೆಮಡುಗುಮುರಳಿ,ಹಿರಿಯಮುಖಂಡರಾದ ಹಸೇನ್‌ಖಾನ್‌,ಖಾಸಿಂಪಾಳ್ಯ ಬಾಸೀದ್‌,ಮಸ್ತಾನ್‌, ಮಾಜಿ ನಗರಸಭೆಯ ಸದಸ್ಯ ಮಂಜುನಾಥ್‌, ಜಾಬೀರ್‌, ಝಬೀ ಉಲ್ಲಾ,ಜಿಲ್ಲಾ ಸಹಕಾರಿಯೂನಿಯನ್‌ ಮಾಜಿನಿರ್ದೇಶಕ ತಾದೂರುರಮೇಶ್‌,ಸೊಣ್ಣೇನಹಳ್ಳಿಮುನಿರಾಜು,ಚೀಮಂಗಲ ಗ್ರಾಪಂ ಮಾಜಿ ಉಪಾಧ್ಯಕ್ಷ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

ಡಾ.ಧನಂಜಯರೆಡ್ಡಿ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಸಾದಲಿ ಮತ್ತು ಬಶೆಟ್ಟಹಳ್ಳಿ ಹೋಬಳಿಗಳ ಜವಾಬ್ದಾರಿ ಅವರಿಗೆ ನೀಡಿದ್ದೇನೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆ ಪುರಸ್ಕರಿಸಿ ಕೆಲಸ ಮಾಡಿದ್ದೇನೆ. ಆದರೂ ಬೇರೆಯವರೊಂದಿಗೆ ಗುರುತಿಸಿಕೊಂಡಿರುವುದು ಅವರ ವೈಯಕ್ತಿಕ ತೀರ್ಮಾನ. ಎಂ.ರಾಜಣ್ಣ , ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next