ಕಟಪಾಡಿ: ಜಾರುಕುದ್ರು ಸಂಪರ್ಕ ಸೇತುವೆ ಕಾಮಗಾರಿ ಪೂರೈಸಿ ಅಕ್ಟೋಬರ್ ಒಳಗಾಗಿ ಜನರ ಉಪಯೋಗಕ್ಕೆ ಲಭ್ಯವಾಗದಲ್ಲಿ ಧರಣಿ ನಡೆಸುವ ಎಚ್ಚರಿಕೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೀಡಿರುತ್ತಾರೆ
ಅವರು ಆ.26ರಂದು ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 7 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾರುಕುದ್ರು ಸೇತುವೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದರು
ಕಳೆದ 3 ವರ್ಷಗಳ ಹಿಂದೆ ತಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರುಗೊಳಿಸಿರುವ ಈ ಸೇತುವೆಯ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ವೇಗವನ್ನು ಹೆಚ್ಚಿಸಿ ಶೀಘ್ರದಲ್ಲಿ ಜನೋಪಯೋಗಕ್ಕೆ ಒದಗಿಸಬೇಕೆಂದು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಇಲ್ಲಿನ ಸಮಸ್ಯೆಯ ಬಗ್ಗೆ ಸರಕಾರದ ಗಮನಕ್ಕೆ ತರಲು ಸರಕಾರಿ ಕಚೇರಿಯ ಮುಂದೆ ಧರಣಿ ನಡೆಸುವ ಮೂಲಕ ಸರಕಾರಕ್ಕೆ ಒತ್ತಡ ಹಾಕಲು ಸಿದ್ಧ ಎಂದರು
ಕಾಪು ಕ್ಷೇತ್ರದ ವಿವಿಧೆಡೆ ಒಟ್ಟು 7 ಸಂಪರ್ಕ ಸೇತುವೆ ಕಾಮಗಾರಿಗಳನ್ನು ಶಾಸಕತ್ವದ ಅವಧಿಯಲ್ಲಿ ಮಂಜೂರುಗೊಳಿಸಲಾಗಿದ್ದು, ಭೇಟಿ ನೀಡಿ ವೀಕ್ಷಿಸಲಾಗುತ್ತದೆ. ಈ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಲ್ಲಿ ಈ ಭಾಗಗಳ ಜನರ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮದಲ್ಲೂ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದರು
ಈ ಸಂದರ್ಭ ಸೇತುವೆಯನ್ನು ಮಂಜೂರು ಗೊಳಿಸಿದ್ದಕ್ಕಾಗಿ ಸ್ಥಳೀಯ ಜಾರುಕುದ್ರು ನಿವಾಸಿಗಳು ಮಾಜಿ ಸಚಿವ ವಿನಯ ಕುಮಾರ್ ಸೊರಕೆಗೆ ಕೃತಜ್ಞತೆ ಸಲ್ಲಿಸಿದರು
ಈ ಸಂದರ್ಭ ಮಾಜಿ ತಾ.ಪಂ. ಸದಸ್ಯ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಉದ್ಯಾವರ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಚಂದ್ರಾವತಿ ಎಸ್ ಭಂಡಾರಿ, ಸರಳಾ ಎಸ್ ಕೋಟ್ಯಾನ್, ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಮಾಜಿ ಗ್ರಾ.ಪಂ ಸದಸ್ಯರುಗಳಾದ ಲಾರೆನ್ಸ್ ಡೇಸಾ, ರಾಜೀವಿ, ಲಕ್ಷ್ಮಣ್ ಸನಿಲ್, ಗ್ಲಾಡಿಸ್ ಮೆಂಡೋನ್ಸಾ, ಪ್ರಮುಖರಾದ ಉದ್ಯಾವರ ನಾಗೇಶ್ ಕುಮಾರ್, ಅಬಿದ್ ಆಲಿ, ಗಿರೀಶ್ ಗುಡ್ಡೆಯಂಗಡಿ, ಶೇಖರ್ ಕೋಟ್ಯಾನ್, ಶ್ರೀಧರ್ ಕಲಾೈ, ರಾಯ್ಸ್ ಫೆರ್ನಾಂಡೀಸ್, ಅಶೋಕ್ ನಾೈರಿ, ನಾಗೇಶ್ ಕಾಪು, ಇಲಾಖೆಯ ಎ.ಡಬ್ಲೂ ್ಯ .ಇ. ಚೆನ್ನಪ್ಪ ಮೊಯ್ಲಿ, ಸಹಾಯಕ ಎಂಜಿನಿಯರ್ ತ್ರಿನೇಶ್, ಜಾರುಕುದ್ರು ನಿವಾಸಿಗಳು, ಮತ್ತಿತರರು ಉಪಸ್ಥಿತರಿದ್ದರು