ಬನಹಟ್ಟಿ: ಜವಳಿ ಸಚಿವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ. ಬರೀ ಮನವಿ ಮೇಲೆ ಮನವಿ ತೆಗೆದುಕೊಂಡು ಇಟ್ಟುಕೊಳ್ಳುತ್ತಿದ್ದಾರೆ. ಹೊರತು ಏನು ಪ್ರಯೋಜನೆ ಆಗುತ್ತಿಲ್ಲ. ಅವರು ಕೂಡಲೇ ನೇಕಾರರ ನೆರವಿಗೆ ಬರಬೇಕು. ಎಂದು ಮಾಜಿ ಸಚಿವೆ ಉಮಾಶ್ರೀ ಒತ್ತಾಯಿಸಿದರು.
ಅವರು ಬುಧವಾರ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪುರದಲ್ಲಿ ಮಂಗಳವಾರ ಸಾಲಬಾದೆ ತಾಳಲಾರದೆ ಆತ್ಮತ್ಯೆ ಮಾಡಕೊಂಡ ನೇಕಾರ ಷಣ್ಮುಖ ಗೋಡಚಪ್ಪ ಮುರಗುಂಡಿ (6೦) ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿ ಪತ್ರಕರ್ತರೊಂದಿಗೆ ಮಾತನಾಡಿದರು.
ಈ ಕೂಡಲೇ ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಪರಿಹಾರ ಧನ ಕೊಡಬೇಕು. ಮಾಲೀಕರು ಗುರುತಿಸಿದ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆಯಲ್ಲಿ ಪರಿಹಾರ ಧನ ಕೊಡಬೇಕು. ಕೋವಿಡ್ ಸಂದರ್ಭದಲ್ಲಿ ಸಾಲ ಬಡ್ಡಿಮನ್ನಾ ಮಾಡುವುದರ ಜೊತೆಗೆ ವಿದ್ಯುತನ್ನು ಉಚಿತವಾಗಿ ನೀಡಬೇಕು. ಅಸಂಘಟಿತರಾಗಿರುವ ನೇಕಾರರನ್ನು ಗುರುತಿಸಿ ಕಾರ್ಮಿಕ ಇಲಾಖೆಯವರು ಅವರನ್ನು ಗುರುತಿಸಿ ಅವರನ್ನು ನೊಂದಣಿ ಮಾಡಿಸಿ ಸರಕಾರಿ ಸೌಲಭ್ಯಗಳು ಬರುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜವಳಿ ಇಲಾಖೆ ಎಚ್ಚೆತ್ತುಕೊಂಡು ಮೃತಪಟ್ಟ ನೇಕಾರರಿಗೆ ಒಂದು ಲಕ್ಷ ರೂಪಾಯಿ ಹಣವನ್ನು ನೇಕಾರರ ಕುಟುಂಬಕ್ಕೆ ನೀಡಬೇಕೆಂದು ಮಾಜಿ ಸಚಿವೆ ಉಮಾಶ್ರೀ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೃತಪಟ್ಟ ನೇಕಾರರ ಕುಟುಂಬಕ್ಕೆ ಮಾಜಿ ಸಚಿವೆ ಉಮಾಶ್ರೀ ಅವರು 10,000 ರೂಪಾಯಿ ಧನಸಹಾಯ ಮಾಡಿ ನೀವು ಧೈರ್ಯದಿಂದ ಇರಿ ನಿಮ್ಮ ಕಷ್ಟಕ್ಕೆ ನಮ್ಮ ಕಾಂಗ್ರೆಸ್ ಪಕ್ಷ ಮತ್ತು ನಾನು ನಿಮ್ಮ ಬೆನ್ನಿಗೆ ನಿಂತು ಬರುವ ದಿನಮಾನಗಳಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಗಮನಕ್ಕೆ ತರುತ್ತೇನೆ ಮತ್ತು ಸರ್ಕಾರ ಗಮನ ಸೆಳೆಯುತ್ತೇವೆ ಇನ್ನಷ್ಟು ಸರ್ಕಾರದಿಂದ ನಿಮಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸತ್ಯಪ್ಪ ಮಗದುಮ, ರಾಜು ಭದ್ರಣ್ಣವರ, ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಬಸವರಾಜ ಗುಡೊಡಗಿ, ಸಂಗಪ್ಪ ಕುಂದಗೋಳ, ಕಿರಣ ಕರಲಟ್ಟಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : ಮನ್‌ಮುಲ್ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿ ಅಧಿಕೃತ ಆದೇಶ ಹೊರಡಿಸಿದ ಸರ್ಕಾರ