Advertisement

ಪ್ರಥಮ ಲೋಕಪಾಲ ನ್ಯಾ.ಘೋಷ್‌ ಪ್ರಮಾಣ ಸ್ವೀಕಾರ

09:05 AM Mar 25, 2019 | Vishnu Das |

ಹೊಸದಿಲ್ಲಿ: ದೇಶದ ಮೊತ್ತ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌ (66) ಶನಿವಾರ ಪ್ರಮಾಣ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಘೋಷ್‌ರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು.

Advertisement

ಕಳೆದ ಮಂಗಳವಾರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಘೋಷ್‌ರನ್ನು ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರನ್ನಾಗಿ ಘೋಷಿಸಲಾಗಿತ್ತು. ವಿವಿಧ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯ ಮೂರ್ತಿ  ಗಳಾದ ದಿಲೀಪ್‌ ಬಿ. ಭೋಸ್ಲೆ, ಪ್ರದೀಪ್‌ ಕುಮಾರ್‌ ಮೊಹಾಂತಿ, ಅಭಿಲಾಷಾ ಕುಮಾರಿ, ಅಜಯ ಕುಮಾರ್‌ ತ್ರಿಪಾಠಿ ಅವರನ್ನು ಲೋಕ ಪಾಲದ ನ್ಯಾಯಾಂಗ ವಿಭಾಗದ ಸದಸ್ಯರನ್ನಾಗಿ ನೇಮಿಸಲಾಗಿದೆ.

ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಮೊದಲ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮ ಚಂದ್ರನ್‌, ಮಹಾರಾಷ್ಟ್ರ ನಿವೃತ್ತ ಮುಖ್ಯ ಕಾರ್ಯದರ್ಶಿ ದಿನೇಶ್‌ ಕುಮಾರ್‌ ಜೈನ್‌, ನಿವೃತ್ತ ಐಆರ್‌ಎಸ್‌ ಅಧಿಕಾರಿ ಮಹೇಂದ್ರ ಸಿಂಗ್‌ ಮತ್ತು ಗುಜ ರಾತ್‌ ಕೇಡರ್‌ನ ನಿವೃತ್ತ ಐಎಎಸ್‌ ಅಧಿಕಾರಿ ಇಂದ್ರಜಿತ್‌ ಪ್ರಸಾದ್‌ ಗೌತಮ್‌ ಅವರನ್ನು ನ್ಯಾಯಾಂ ಗೇತರ ಸದಸ್ಯರನ್ನಾಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next