Advertisement
ಹೌದು ಎನ್ನುತ್ತಿವೆ ಮೂಲಗಳು. ನವೀನ್ ಪಟ್ನಾಯಕ್ ಅವರ ಆಪ್ತ, ನಿವೃತ್ತ ಐಎಎಸ್ ಅಧಿಕಾರಿ ವಿ. ಕಾರ್ತಿಕೇಯ ಪಾಂಡ್ಯನ್ ಅವರು ಸೋಮವಾರ ಅಧಿಕೃತವಾಗಿ ಬಿಜೆಡಿಗೆ ಸೇರ್ಪಡೆಯಾ ಗಿದ್ದಾರೆ. ಕಳೆದ ತಿಂಗಳವರೆಗೂ ಪಾಂಡ್ಯನ್ ಅವರು ಒಡಿಶಾ ಮುಖ್ಯ ಮಂತ್ರಿಯ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಅವರು, ಒಡಿಶಾದ ಚೇರ್ಮನ್ 5ಟಿ (ಪರಿವರ್ತನೀಯ ಯೋಜನೆಗಳು) ಆಗಿ ನೇಮಕಗೊಳ್ಳುವ ಮೂಲಕ ಸಂಪುಟ ದರ್ಜೆ ಸಚಿವನ ಸ್ಥಾನ ವನ್ನು ಪಡೆದರು. ಸೋಮವಾರ ಅವರು ಭುವನೇಶ್ವರದಲ್ಲಿ ಇರುವ ಪಟ್ನಾಯಕ್ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ.
ವಿ.ಕೆ. ಪಾಂಡ್ಯನ್ ಅವರಿಗೆ ಬಿಜೆಡಿಯಲ್ಲಿ ಯಾವ ಹುದ್ದೆ ಸಿಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪಟ್ನಾಯಕ್ ಸರಕಾ ರದ ಈವರೆಗಿನ ಬಹುತೇಕ ಯೋಜ ನೆಗಳ ಹಿಂದಿನ ರೂವಾರಿ ಇವರೇ ಆಗಿದ್ದು, ಈಗ ಪಕ್ಷಕ್ಕೆ ಅಧಿಕೃತ ಪ್ರವೇಶ ಪಡೆದಿರುವ ಕಾರಣ ಎರಡನೇ ಅಗ್ರ ನಾಯಕನ ಹುದ್ದೆ ಸಿಗುವುದಂತೂ ಖಚಿತ ಎನ್ನುವುದು ಉನ್ನತ ಮೂಲಗಳ ವಾದ. 1997ರ ಡಿ. 26ರಂದು ಬಿಜು ಜನತಾ ದಳ ಸ್ಥಾಪನೆ ಮಾಡಿದ ದಿನದಿಂದ ನವೀನ್ ಪಟ್ನಾಯಕ್ ಅವರೇ ಅಧ್ಯ ಕ್ಷರಾಗಿ ಮುಂದುವರಿದಿದ್ದಾರೆ. ಅವರು ಅಧ್ಯಕ್ಷರಾಗಿದ್ದರೂ ಪಕ್ಷದ ವ್ಯವಹಾ ರಗಳನ್ನು ಪಾಂಡ್ಯನ್ ಅವರೇ ನೋಡಿ ಕೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ.
Related Articles
ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಮಾತ ನಾಡಿ ವಿ.ಕೆ. ಪಾಂಡ್ಯನ್ ಸೇರ್ಪ ಡೆಯಿಂದ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿಲ್ಲ. ಅವರು ತಮಿಳು ನಾಡಿನವರು ಎಂಬ ಕಾರಣಕ್ಕೆ ಪಕ್ಷದಲ್ಲಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟವಾ ಗಲಿದೆ ಎಂಬ ವಿಚಾರವೇ ಉದ್ಭವ ವಾಗುವುದಿಲ್ಲ ಎಂದರು.
Advertisement